ADVERTISEMENT

ರಣವೀರ್-ದೀಪಿಕಾ ಅಭಿನಯದ '83' ಸಿನಿಮಾ ಶೀಘ್ರದಲ್ಲೇ 200 ಕೋಟಿ ಕ್ಲಬ್‌ಗೆ ಸೇರ್ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2022, 5:42 IST
Last Updated 10 ಜನವರಿ 2022, 5:42 IST
83 ಸಿನಿಮಾದ ಪೋಸ್ಟರ್
83 ಸಿನಿಮಾದ ಪೋಸ್ಟರ್   

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದರ ಹೊರತಾಗಿಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ನಟ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ '83' ಸಿನಿಮಾ ಯಶಸ್ವಿಯಾಗಿದೆ. ಕಬೀರ್ ಖಾನ್ ನಿರ್ದೇಶನದ ಈ ಸಿನಿಮಾ ಭಾರತ ಸೇರಿದಂತೆ ವಿದೇಶದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿದೆ.

ಚಲನಚಿತ್ರ ಪ್ರೇಮಿಗಳು ರಣವೀರ್ ಅವರ ಆ್ಯಕ್ಷನ್ ಅನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದು, 83 ಚಿತ್ರವು ಶೀಘ್ರದಲ್ಲೇ 200 ಕೋಟಿ ಕ್ಲಬ್‌ಗೆ ಸೇರಬಹುದು ಎನ್ನಲಾಗಿದೆ. ಈ ಸಿನಿಮಾ ಡಿ. 24, 2021 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿತ್ತು.

ಶನಿವಾರದಂದು (ಜ.8) ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು ₹ 175 ಕೋಟಿ ಗಳಿಸಿದೆ. ಈಗ ಈ ಚಿತ್ರ ಶೀಘ್ರದಲ್ಲೇ 200 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ.

ADVERTISEMENT

ಮಾರುಕಟ್ಟೆ ವಿಶ್ಲೇಷಕ ಮನೋಬಲ ವಿಜಯಬಾಲನ್ ಅವರ ಟ್ವೀಟ್ ಪ್ರಕಾರ, '83' ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹ 175 ಕೋಟಿ ಸಂಗ್ರಹಿಸಿದೆ. ಒಂದನೇ ವಾರದಲ್ಲಿ ₹ 123.75 ಕೋಟಿ, ಎರಡನೇ ವಾರದಲ್ಲಿ ₹ 50.71 ಕೋಟಿ, ಮೂರನೇ ವಾರದಲ್ಲಿ ₹1.83 ಕೋಟಿ ಗಳಿಸುವ ಮೂಲಕ ಒಟ್ಟು ₹ 176.29 ಕೋಟಿಯನ್ನು ಕಲೆಹಾಕಿದೆ ಎಂದು ಹೇಳಿದ್ದಾರೆ.

ಕಪಿಲ್‌ ದೇವ್‌ ನೇತೃತ್ವದ ಭಾರತ ಕ್ರಿಕೆಟ್‌ ತಂಡವು 1983ರಲ್ಲಿ ವಿಶ್ವಕಪ್‌ ಗೆದ್ದ ಐತಿಹಾಸಿಕ ದಿನದ ಕತೆಯನ್ನು ‘83’ ಚಿತ್ರವು ಒಳಗೊಂಡಿದೆ. ರಣವೀರ್‌ ಸಿಂಗ್‌ ಅವರು ಕಪಿಲ್‌ ದೇವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಡಿಸೆಂಬರ್‌ 24ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. 83 ಚಿತ್ರಕ್ಕೆ ಕಬೀರ್ ಖಾನ್, ಸಾಜಿದ್ ನಾಡಿಯವಾಲ ಮತ್ತು ದೀಪಿಕಾ ಪಡುಕೋಣೆ ನಿರ್ಮಾಪಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.