‘ಘೋಸ್ಟ್’ ಸಿನಿಮಾ ಬಳಿಕ ನಟ ಶಿವರಾಜ್‌ಕುಮಾರ್ ಹಾಗೂ ನಿರ್ದೇಶಕ ಶ್ರೀನಿ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾವೊಂದು ಘೋಷಣೆಯಾಗಿದೆ. ಶಿವರಾಜ್‌ಕುಮಾರ್ ಕೈಗೆ ಶ್ರೀನಿ ಇದೀಗ ಪೆನ್ನು, ಬಳಪ ನೀಡಿ ಪಾಠಶಾಲೆಗೆ ‘ಮೇಸ್ಟ್ರು’ ಮಾಡಿದ್ದಾರೆ.
ಇವರ ಹೊಸ ಸಿನಿಮಾ ‘A for ಆನಂದ್’ನ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ‘ವೇದ’, ‘ಭೈರತಿ ರಣಗಲ್’ ಬಳಿಕ ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿರಲಿದೆ. ‘ಮಫ್ತಿ’ ಸಿನಿಮಾದಲ್ಲಿ ಡಾನ್ ಆಗಿ, ‘ಟಗರು’ ಸಿನಿಮಾದಲ್ಲಿ ಪೊಲೀಸ್ ಆಗಿ, ‘ಭೈರತಿ ರಣಗಲ್’ ಸಿನಿಮಾದಲ್ಲಿ ‘ಲಾಯರ್’ ಆಗಿ ಹೀಗೆ ಭಿನ್ನ ಪಾತ್ರಗಳಿಗೆ ಬಣ್ಣಹಚ್ಚುತ್ತಿರುವ ಶಿವರಾಜ್‌ಕುಮಾರ್ ಮೇಸ್ಟ್ರಾಗಿ ಬಣ್ಣಹಚ್ಚಲಿದ್ದಾರೆ. ‘ಸುಂದರಕಾಂಡ’ ಸಿನಿಮಾದಲ್ಲಿ ಕನ್ನಡ ಟೀಚರ್ ಆಗಿದ್ದ ಶಿವರಾಜ್‌ಕುಮಾರ್ ಬಹಳ ವರ್ಷಗಳ ಬಳಿಕ ಮತ್ತೆ ಟೀಚರ್ ಆಗುತ್ತಿದ್ದಾರೆ. ಇದು ನೈಜ ಘಟನೆಯಾಧಾರಿತ ಸಿನಿಮಾ. ಚಿತ್ರದಲ್ಲಿ ಒಂದೊಳ್ಳೆಯ ಸಂದೇಶವಿದೆ ಎಂದಿದೆ ಚಿತ್ರತಂಡ.
‘A for ಆನಂದ್’ ಸಿನಿಮಾಗೆ ಬಹುತೇಕ ‘ಘೋಸ್ಟ್’ ತಾಂತ್ರಿಕ ವರ್ಗವೇ ಕೆಲಸ ಮಾಡುತ್ತಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್. ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಚಿತ್ರಕ್ಕಿದೆ. 2025ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಚಿತ್ರತಂಡ ಶೂಟಿಂಗ್ ಆರಂಭಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.