ಹೈದರಾಬಾದ್: ‘ನಿರ್ಮಾಪಕ ಬನ್ನಿ ವಾಸು ಅವರಿಂದ ನನಗೆ ಮೋಸ ಆಗಿದೆ’ ಎಂದು ಯುವತಿಯೊಬ್ಬರು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಹೈದರಾಬಾದ್‌ನ ಗೀತಾ ಆರ್ಟ್ಸ್ ಕಚೇರಿ ಮುಂದೆ ಬೆತ್ತಲೆಯಾಗಿ ಪ್ರತಿಭಟನೆ ಮಾಡಿರುವ ಘಟನೆ ವರದಿಯಾಗಿದೆ.
ಗೀತಾ ಆರ್ಟ್ಸ್ ಸೆಕ್ಯೂರಿಟಿ ಈ ಬಗ್ಗೆ ದೂರು ನೀಡಿದ ತಕ್ಷಣ ಬೆತ್ತಲೆ ಪ್ರತಿಭಟನೆ ನಡೆಸಿದ ಸುನಿತಾ ಬೋಯಾ ಎನ್ನುವ ಯುವತಿಯನ್ನು ಪೊಲೀಸರು ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
‘ನಿರ್ಮಾಪಕ ಬನ್ನಿ ವಾಸು ಅವರಿಂದ ನನಗೆ ಮೋಸವಾಗಿದೆ. ಅವರಿಂದ ನಾನು ಸಾಕಷ್ಟು ಮಾನಸಿಕವಾಗಿ ನೊಂದಿದ್ದೇನೆ’ ಎಂದು ಯುವತಿ ಪ್ರತಿಭಟನೆಯ ವೇಳೆ ಹೇಳಿದ್ದಾರೆ.
ಯುವತಿ ಬೆತ್ತಲೆ ಪ್ರತಿಭಟನೆ ಮಾಡುತ್ತಿರುವುದನ್ನು ಕಂಡು ಪೊಲೀಸರು ಬಟ್ಟೆ ಹೊದಿಸಿ, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.ಸುನಿತಾ ಬೋಯಾ ಅವರು ಕೆಲ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.
ನಿರ್ಮಾಪಕ ಬನ್ನಿ ವಾಸು ಅವರುಗೀತಾ ಆರ್ಟ್ಸ್ ಜೊತೆಯಾಗಿ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ತೆಲುಗಿನ ಪ್ರಮುಖ ನಿರ್ಮಾಪಕ ಎನಿಸಿಕೊಂಡಿದ್ದಾರೆ. ಅವರ ನಿರ್ಮಾಣದ ‘100% ಲವ್’, ಗೀತ–ಗೋವಿಂದ, ಸರೈನೋಡು, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸೇರಿದಂತೆ ಹಲವು ಚಿತ್ರಗಳು ಹಿಟ್ ಆಗಿವೆ. ಯುವತಿಯ ಆರೋಪದ ಬಗ್ಗೆ ಬನ್ನಿ ವಾಸು ಅವರು ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಕೂಡ ಇದೇ ಯುವತಿ, ಬನ್ನಿ ವಾಸು ಅವರ ವಿರುದ್ಧ ಬಹಿರಂಗ ಪ್ರತಿಭಟನೆ ಮಾಡಿದ್ದರು. ದೂರು ಕೋರ್ಟ್‌ನಲ್ಲಿ ಇತ್ಯರ್ಥವಾಗಿತ್ತು ಎಂದು ‘ನ್ಯೂಸ್ 18 ತೆಲುಗು’ ವರದಿ ತಿಳಿಸಿದೆ.ಇನ್ನು ಗೀತಾ ಆರ್ಟ್ಸ್ ಸಂಸ್ಥೆ ನಟ ಅಲ್ಲು ಅರವಿಂದ್ ಅವರಿಗೆ ಸಂಬಂಧಿಸಿದ್ದಾಗಿದೆ.
ಈ ಹಿಂದೆ ನಟಿ ಶ್ರೀ ರೆಡ್ಡಿ ಎನ್ನುವರು ಕೂಡ ಇದೇ ರೀತಿ ನಟ, ನಿರ್ಮಾಪಕರ ವಿರುದ್ಧ ಬೆತ್ತಲೆ ಪ್ರತಿಭಟನೆ ಮಾಡಿ ಸುದ್ದಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.