ADVERTISEMENT

ಅನ್ಯರ ವಿಚ್ಛೇದನ ಕುರಿತ ಪೋಸ್ಟ್‌ಗೆ ಅಭಿಷೇಕ್ ಲೈಕ್‌: ಐಶ್ವರ್ಯಾ ಹೆಸರು ತಳುಕು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜುಲೈ 2024, 9:58 IST
Last Updated 18 ಜುಲೈ 2024, 9:58 IST
<div class="paragraphs"><p>ಐಶ್ವರ್ಯಾ ರೈ ಬಚ್ಚನ್‌ ಹಾಗೂ ಅಭಿಷೇಕ್‌ ಬಚ್ಚನ್‌</p></div>

ಐಶ್ವರ್ಯಾ ರೈ ಬಚ್ಚನ್‌ ಹಾಗೂ ಅಭಿಷೇಕ್‌ ಬಚ್ಚನ್‌

   

ಮುಂಬೈ: ಬಾಲಿವುಡ್‌ನ ಸ್ಟಾರ್‌ ಜೋಡಿ ನಟಿ ಐಶ್ವರ್ಯಾ ರೈ ಬಚ್ಚನ್‌ ಹಾಗೂ ನಟ ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎನ್ನುವ ವದಂತಿ ಬೆನ್ನಲ್ಲೇ ಅಭಿಷೇಕ್‌ ಅವರು ವಿಚ್ಛೇದನಕ್ಕೆ ಸಂಬಂಧಿಸಿದ ಫೋಸ್ಟ್‌ವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಲೈಕ್‌ ಮಾಡಿದ್ದು ವದಂತಿಗೆ ಪುಷ್ಟಿ ನೀಡಿದಂತಿದೆ. 

ಇತ್ತೀಚೆಗೆ ನಡೆದ ಅನಂತ್‌ ಅಂಬಾನಿ –ರಾಧಿಕಾ ಮರ್ಚಂಟ್‌ ಮದುವೆಯಲ್ಲಿಯೂ ಬಚ್ಚನ್‌ ಕುಟುಂಬ ಒಂದೆಡೆಯಾದರೆ, ಐಶ್ವರ್ಯಾ ಹಾಗೂ ಪುತ್ರಿ ಆರಾಧ್ಯ ಪ್ರತ್ಯೇಕವಾಗಿ ಬಂದಿದ್ದು ಸುದ್ದಿಯಾಗಿತ್ತು.

ADVERTISEMENT

ಈ ಹಿಂದೆ ಐಶ್ವರ್ಯಾ– ಅಭಿಷೇಕ್‌ ಡಿವೋರ್ಸ್ ಪಡೆದಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ ಈವರೆಗೂ ಐಶ್ವರ್ಯಾರಾಗಲಿ ಅಥವಾ ಅಭಿಷೇಕ್‌ ಬಚ್ಚನ್‌ರಾಗಲಿ ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ.

ಹೇನಾಖಾಂಡ್ಲವಾಲ್‌ ಎನ್ನುವವರು ಇನ್‌ಸ್ಟಾಗ್ರಾಂನಲ್ಲಿ ವಿಚ್ಛೇದನ ಕುರಿತಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಅದನ್ನು ಅಭಿಷೇಕ್‌ ಬಚ್ಚನ್‌ ಲೈಕ್‌ ಮಾಡಿದ್ದಾರೆ.

ಈ ಪೋಸ್ಟ್‌ನಲ್ಲಿ ‘ಯಾರೊಬ್ಬರಿಗೂ ವಿಚ್ಛೇದನ ಸುಲಭವಲ್ಲ. ವೃದ್ಧ ದಂಪತಿ ಕೈ ಹಿಡಿದು ರಸ್ತೆ ದಾಟುವ ವಿಡಿಯೊ ನೋಡಿದಾಗ ನಮ್ಮ ಜೀವನದಲ್ಲೂ ಇದು ನಿಜವಾಗಬೇಕು ಎಂದು ಎಷ್ಟು ಜನ ಕನಸು ಕಂಡಿರುವುದಿಲ್ಲ?. ಆದರೆ ಕೆಲವೊಮ್ಮೆ ನಾವಂದುಕೊಂಡಂತೆ ಜೀವನ ಸಾಗದು. ದಶಕಗಳ ಕಾಲ ಒಟ್ಟಿಗೇ ಇದ್ದು, ಜೀವನದ ಪ್ರಮುಖ ಘಟ್ಟಗಳನ್ನು ಜೊತೆಯಾಗಿ ನಿಭಾಯಿಸಿ, ಸಣ್ಣದಾಗಲೀ –ದೊಡ್ಡದಾಗಲಿ ಪ್ರತಿಯೊಂದು ವಿಷಯಗಳಿಗೂ ಪರಸ್ಪರ ಅವಲಂಬಿತರಾಗಿದ್ದ ಜನರು ಒಮ್ಮೆಗೇ ಬೇರೆ ಬೇರೆಯಾಗಿ ಬದುಕುವುದೆಂದರೆ ಹೇಗೆ?’. ಹೀಗೆ ವಿಚ್ಛೇದನ ಬಹು ಕಠಿಣ ಎನ್ನುವ ಬಗ್ಗೆ ಸುದೀರ್ಘ ಬರಹವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.