ADVERTISEMENT

60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2023, 16:00 IST
Last Updated 25 ಮೇ 2023, 16:00 IST
ಆಶಿಶ್ ವಿದ್ಯಾರ್ಥಿ, ರೂಪಾಲಿ
ಆಶಿಶ್ ವಿದ್ಯಾರ್ಥಿ, ರೂಪಾಲಿ   

ಕೋಲ್ಕತ್ತ: ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ತಮ್ಮ 60ನೇ ವಯಸ್ಸಿನಲ್ಲಿ ಫ್ಯಾಶನ್‌ ಉದ್ಯಮಿ ರೂಪಾಲಿ ಬರೋವಾ ಅವರನ್ನು ಎರಡನೇ ಮದುವೆಯಾಗಿದ್ದಾರೆ.

ಗುರುವಾರ ಇಲ್ಲಿನ ಖಾಸಗಿ ಹೊಟೇಲ್‌ವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಆಶಿಶ್ ವಿದ್ಯಾರ್ಥಿಯ ಮದುವೆ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ರೂಪಾಲಿ ಬರೋವಾ ಅವರು ಮೂಲತಃ ಅಸ್ಸಾಂ ರಾಜ್ಯದವರು. ಇವರು ಕೋಲ್ಕತ್ತದಲ್ಲಿ ಹಲವಾರು ಫ್ಯಾಶನ್‌ ಮಳಿಗೆಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದ್ದು ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. 

ADVERTISEMENT

ಆಶಿಶ್‌ 20 ವರ್ಷಗಳ ಹಿಂದೆ ಬಂಗಾಳಿ ನಟಿ ಹಾಗೂ ಗಾಯಕಿ ರಾಜೋಶಿ ಅವರನ್ನು ವಿವಾಹವಾಗಿದ್ದರು. ಇವರಿಗೆ ಒಬ್ಬ ಮಗ ಇದ್ದಾನೆ. ಕೆಲವು ವರ್ಷಗಳಿಂದ ಇವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. 

ಕನ್ನಡ ಸೇರಿದಂತೆ ಸುಮಾರು 11 ಭಾಷೆಗಳಲ್ಲಿ ಖಳನಟನಾಗಿ ಹಾಗೂ ಪೋಷಕ ನಟರಾಗಿ ಆಶಿಶ್ ವಿದ್ಯಾರ್ಥಿ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿ ದುರ್ಗಿ, ಕೋಟಿಗೊಬ್ಬ, ಎಕೆ-47, ವಂದೇ ಮಾತರಂ, ಸೈನಿಕ, ನಂದಿ, ಆಕಾಶ್​, ತಂದೆಗೆ ತಕ್ಕ ಮಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.