ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರ ವಿ. ಅವರ ತಾಯಿ ಪಟ್ಟಮ್ಮಾಳ್ವೀರಸ್ವಾಮಿ (83) ಸೋಮವಾರ ನಿಧನರಾಗಿದ್ದಾರೆ.
ಸಿನಿಮಾ ನಿರ್ಮಾಪಕ ಎನ್. ವೀರಸ್ವಾಮಿ ಅವರ ಪತ್ನಿ ಪಟ್ಟಮ್ಮಾಳ್ ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಸುಗುಣ ಆಸ್ಪತ್ರೆಯಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಕೊನೆಯುಸಿರೆಳೆದಿರುವ ಪಟ್ಟಮಾಳ್ ಅವರ ಪಾರ್ಥಿವ ಶರೀರವನ್ನು10.30ಕ್ಕೆ ರವಿಚಂದ್ರ ಅವರ ಮನೆಗೆ ತರಲಾಗುತ್ತದೆ. ಸಂಜೆ ವೇಳೆ ಅಂತ್ಯಕ್ರಿಯೆ ನಡೆಯಲಿದೆ.
ನಟ ರವಿಚಂದ್ರ ಸೇರಿದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳನ್ನು ಪಟ್ಟಮ್ಮಾಳ್ ಅವರು ಅಗಲಿದ್ದಾರೆ.
ಅವರಿಗೆಕಳೆದ ಹತ್ತು ವರ್ಷಗಳಿಂದ ಮರೆವಿನ ಕಾಯಿಲೆಯೂ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.