ADVERTISEMENT

ಮದಕ್ಕೆ ಕಾರುಣ್ಯದ ಅರಿವಿಲ್ಲ.. ನಟ ಜಗ್ಗೇಶ್

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ರಾಜ್ಯಸಭಾ ಬಿಜೆಪಿ ಸಂಸದ ಜಗ್ಗೇಶ್ ಅವರು ಪರೋಕ್ಷವಾಗಿ ದರ್ಶನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2024, 7:32 IST
Last Updated 12 ಜೂನ್ 2024, 7:32 IST
<div class="paragraphs"><p>ನಟ ಜಗ್ಗೇಶ್ –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್&nbsp;</p></div>

ನಟ ಜಗ್ಗೇಶ್ –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್ 

   

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ರಾಜ್ಯಸಭಾ ಬಿಜೆಪಿ ಸಂಸದ ಜಗ್ಗೇಶ್ ಅವರು ಪರೋಕ್ಷವಾಗಿ ದರ್ಶನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಕ್ಸ್‌ ತಾಣದಲ್ಲಿ ಟ್ವೀಟ್ ಮಾಡುವ ಮೂಲಕ, ‘ರಾಮನಾಗು, ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲ!’ ಎಂದು ತಿವಿದಿದ್ದಾರೆ.

ADVERTISEMENT

ಸರ್ವ ಆತ್ಮಾನೇ ನಬ್ರಹ್ಮ, ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ! ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ! ಕಲಿಯುಗದಲ್ಲಿ ದೇವರು ಕಲ್ಲಲ್ಲಾ. ಎಲ್ಲಾ ಕರ್ಮಕ್ಕು ತಕ್ಷಣ ಪಲಿತಾಂಶ ಉಂಟು! ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲ! ಎಂದು ಬರೆದುಕೊಂಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಹಾಗೂ ಅವರ ಆಪ್ತೆ ಪವಿತ್ರಾಗೌಡ ಸೇರಿ ಇತರೆ‌ 13 ಆರೋಪಿಗಳ ವಿಚಾರಣೆ ಮುಂದುವರಿದಿದೆ.

ಠಾಣೆಯ ಸೆಲ್‌ನಲ್ಲಿ ದರ್ಶನ್ ಸೇರಿ ಇತರೆ 12 ಆರೋಪಿಗಳನ್ನು ಇಡಲಾಗಿದೆ. ಎಲ್ಲ ಆರೋಪಿಗಳೂ ಅಲ್ಲೇ ರಾತ್ರಿ ಕಳೆದರು. ಮಂಗಳವಾರ ರಾತ್ರಿ ತನಿಖಾಧಿಕಾರಿಗಳು ಕೆಲವು ಪ್ರಶ್ನೆ ಕೇಳಿ ವಿಚಾರಣೆ ನಡೆಸಿದ್ದರು. ಇಂದು ಮತ್ತೆ ಠಾಣೆಯಲ್ಲೇ ವಿಚಾರಣೆ ನಡೆಯಲಿದೆ‌.

ಪವಿತ್ರಾಗೌಡ ಅವರನ್ನು ನಿಮ್ಹಾನ್ಸ್‌ ಬಳಿಯ ಮಹಿಳಾ ಸಾಂತ್ವನ‌ ಕೇಂದ್ರದಲ್ಲಿ ‌ಇರಿಸಲಾಗಿತ್ತು. ಅಲ್ಲಿಂದ ಬುಧವಾರ ಬೆಳಿಗ್ಗೆಯೇ ಅನ್ನಪೂರ್ಣೇಶ್ವರಿ ನಗರ ಠಾಣೆಗೆ‌ ಕರೆ ತರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.