ADVERTISEMENT

ಬಂಡೀಪುರದಲ್ಲಿ ನಟ ಧನ್ವೀರ್ ಗೌಡ ರಾತ್ರಿ ಸಫಾರಿ; ಪರಿಸರ ಪ್ರಿಯರಿಂದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 8:48 IST
Last Updated 23 ಅಕ್ಟೋಬರ್ 2020, 8:48 IST
ನಟ ಧನ್ವೀರ್ ಗೌಡ
ನಟ ಧನ್ವೀರ್ ಗೌಡ    

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗುರುವಾರ ರಾತ್ರಿ ಚಲನಚಿತ್ರ ನಟ ಧನ್ವೀರ್ ಮತ್ತು ತಂಡ ಗುರುವಾರ ರಾತ್ರಿ ಸಫಾರಿ ನಡೆಸಿದ್ದು, ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡಿರುವುದಕ್ಕೆ ಪರಿಸರ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಯಮದ ಪ್ರಕಾರ, ರಾತ್ರಿ ಸಫಾರಿ ಮಾಡುವಂತಿಲ್ಲ. ಧನ್ವೀರ್ ಮತ್ತು ತಂಡ ಜೀಪಿನಲ್ಲಿ ಸಫಾರಿ ಮಾಡುತ್ತಿರುವ ವಿಡಿಯೊ‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಫಾರಿ ಸಂದರ್ಭದಲ್ಲಿ ಹುಲಿಯೊಂದು ಕಾಣಿಸಿಕೊಂಡಿದೆ. ಸ್ಥಳೀಯರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಸಾಮಾನ್ಯ ಜನರಾದರೆ ಅಧಿಕಾರಿಗಳು ರಾತ್ರಿ ಸಫಾರಿಗೆ ಬಿಡುತ್ತಿದ್ದರಾ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

‘ಇದು ನನ್ನ ಗಮನಕ್ಕೆ ಬಂದಿಲ್ಲ. ವಿಡಿಯೊವನ್ನು ಈಗಷ್ಟೇ‌ ನೋಡಿದೆ. ಈ ಬಗ್ಗೆ ಪರಿಶೀಲಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು‌. ಒಂದು ವೇಳೆ, ಇಲಾಖೆ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.