'ಗಜಿನಿ' ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ಎ. ಆರ್. ಮುರುಗದಾಸ್ ನಿರ್ಮಿಸುತ್ತಿರುವನೂತನ 'ಆಗಸ್ಟ್ 16, 1947' ಚಿತ್ರದಲ್ಲಿ ಮುಂಬೈ ಮೂಲದ ಬ್ರಿಟಿಷ್-ಭಾರತೀಯ ನಟ ಜೇಸನ್ ಶಾ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಗೌತಮ್ ಕಾರ್ತಿಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಭಾರತ ಸ್ವಾತಂತ್ರ್ಯ ಸಂಗ್ರಾಮ ಹಾಗೂ ದೇಶಪ್ರೇಮ ಕೇಂದ್ರಿತ ಚಿತ್ರದಲ್ಲಿ ಜೇಸನ್, ನಿಷ್ಠುರ ಬ್ರಿಟಿಷ್ ಅಧಿಕಾರಿಯ ರೂಪದಲ್ಲಿ ಬಣ್ಣ ಹಚ್ಚಿದ್ದಾರೆ.
ಚಿತ್ರದಲ್ಲಿ ತಮಗೆ ದೊರಕಿರುವ ಅವಕಾಶದ ಬಗ್ಗೆ ಜೇಸನ್ ಅತೀವ ಸಂತಸವನ್ನು ವ್ಯಕ್ತಪಡಿಸಿದ್ದು, ಈ ತಂಡದೊಂದಿಗೆ ಕೆಲಸ ಮಾಡುವುದು ಪ್ರತಿಯೊಬ್ಬ ನಟನ ಕನಸಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.