ನಟ ವಿಜಯ್ ರಾಘವೇಂದ್ರ ನಾಯಕ ನಟನಾಗಿರುವ ‘ಮಾಲ್ಗುಡಿ ಡೇಸ್’ ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದೆ. ಚಿತ್ರದಲ್ಲಿ ಅವರುಯುವ ಸಾಹಿತಿ ಹಾಗೂ 75 ವರ್ಷದ ಮುತ್ಸದ್ಧಿಯಾಗಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಕಿಶೋರ್ ಮೂಡಬಿದ್ರೆ.
ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ ನಟ ಜಗ್ಗೇಶ್ ಅವರು ಮಾತು ಪರಭಾಷಾ ಚಿತ್ರಗಳ ಡಬ್ಬಿಂಗ್‌ನತ್ತ ಹೊರಳಿತು. ‘ನ್ಯಾಯಾಲಯ ಕರ್ನಾಟಕದಲ್ಲಿ ಪರಭಾಷೆಯ ಡಬ್ಬಿಂಗ್ ಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡಿತು. ಪರರಾಜ್ಯದ ಸ್ಟಾರ್ ನಟರ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ತೆರೆಕಂಡಿವೆ. ಆದರೆ, ಕನ್ನಡಿಗರು ಆ ಸಿನಿಮಾಗಳನ್ನು ಸಾರಸಗಟಾಗಿ ತಿರಸ್ಕರಿಸಿ ಚೆನ್ನಾಗಿಯೇ ಬುದ್ಧಿ ಕಲಿಸಿದ್ದಾರೆ’ ಎಂದು ಹೇಳಿದರು.
‘ನಮ್ಮದು ಗೋವಿನ ಹಾಲು; ಅವರದು ನಾಯಿ ಹಾಲು. ಬೇರೆ ಭಾಷೆಯ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿದಾಗಲೂ ಜನರು ಇಷ್ಟಪಟ್ಟಿಲ್ಲ. ಕಲಾವಿದನಿಗೆ ಬಣ್ಣವೇ ದೇವರು. ಬಣ್ಣ ಹಾಕಿದಾಗ ಜನರೇ ದೇವರು. ಒಬ್ಬ ಅನ್ನದಾತರಿಂದ ಚಿತ್ರರಂಗದ ನೂರಾರು ಮಂದಿಗೆ ಊಟ ಸಿಗುತ್ತದೆ. ಈ ಸತ್ಯವನ್ನು ಯಾರೊಬ್ಬರೂ ಮರೆಯಬಾರದು’ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.