ADVERTISEMENT

ರಾಮಾಯಣದ ರಾಮನ ಪಾತ್ರ: ರಣಬೀರ್ ಕಪೂರ್‌ ‘ತೆಳ್ಳಗಿನ ಬಿಳಿ ಇಲಿ‘ ಎಂದ ನಟಿ ಕಂಗನಾ ರನೌತ್‌

ಐಎಎನ್ಎಸ್
Published 10 ಜೂನ್ 2023, 12:39 IST
Last Updated 10 ಜೂನ್ 2023, 12:39 IST
ರಣಬೀರ್ ಕಪೂರ್‌
ರಣಬೀರ್ ಕಪೂರ್‌   

ಮುಂಬೈ: ಮಹಾಕಾವ್ಯ ‘ರಾಮಾಯಣ‘ದ ರಾಮನ ಪಾತ್ರದಲ್ಲಿ ಬಾಲಿವುಡ್‌ ನಟ ರಣಬೀರ್‌ ಕಪೂರ್ ನಟಿಸುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ನಟಿ ಕಂಗನಾ ರನೌತ್‌ ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್‌ನ ತಾರಾ ದಂಪತಿ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಅವರು ನಿತೀಶ್‌ ತಿವಾರಿ ನಿರ್ದೇಶನ ಮಾಡಲಿರುವ 'ರಾಮಾಯಣ' ಚಿತ್ರದಲ್ಲಿ ಸೀತೆ ಹಾಗೂ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪ್ರತಿಕ್ರಿಯಿಸಿರುವ ಕಂಗನಾ, ‘ಇತ್ತೀಚಿಗೆ ಮತ್ತೊಂದು ‘ರಾಮಾಯಣ‘ ಚಿತ್ರ ನಿರ್ಮಾಣವಾಗುತ್ತಿದೆ, ರಾಮನ ಪಾತ್ರದಲ್ಲಿ ನಟ ರಣಬೀರ್‌ ಕಪೂರ್‌ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ‘ತೆಳ್ಳಗಿನ ಬಿಳಿ ಇಲಿ‘ (ರಣಬೀರ್‌ ಅವರನ್ನು ಉಲ್ಲೇಖಿಸಿ) ರಾಮನ ಪಾತ್ರದಲ್ಲಿ ಅಭಿನಯಿಸಲು ಸ್ವಲ್ವ ಸನ್‌ ಟ್ಯಾನ್ ಆಗಬೇಕಾಗುತ್ತದೆ ಮತ್ತು ಆತ್ಮಸಾಕ್ಷಿಯನ್ನು ಹೊಂದಿರಬೇಕಾಗುತ್ತದೆ‘ ಎಂದು ಕಿಚಾಯಿಸಿದ್ದಾರೆ.

ADVERTISEMENT

ಈ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕನ್ನಡದ ನಟ ಯಶ್‌ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿರುವ ಕಂಗನಾ, ಚಿತ್ರರಂಗದಲ್ಲಿ ಸ್ವಂತ ಪ್ರಯತ್ನದ ಮೂಲಕ ಬೆಳೆದಿರುವ ಯಶ್‌, ಅವರ ದೇಹ ಧಾಡ್ಯ ಮತ್ತು ಮುಖ ಚಹರೆಯು ವಾಲ್ಮೀಕಿ ರಾಮಾಯಣದ ‘ರಾಮನ ಪಾತ್ರಕ್ಕೆ‘ ಹೋಲುತ್ತದೆ. ಆದರೆ, ರಾವಣನ ಪಾತ್ರದಲ್ಲಿ ನಟಿಸುವಂತೆ ಯಶ್‌ ಅವರನ್ನು ಕೇಳಲಾಗಿದೆ.. ಇದೆಂತಹ ‘ಕಲಿಯುಗ‘, ಜೈ ಶ್ರೀರಾಮ್‌ ಎಂದು ಆಕ್ಷೇಪಿಸಿದ್ದಾರೆ.

ನಟಿ ಕಂಗನಾ ರನೌತ್‌

ಕಂಗನಾ ಅವರು 'ಎಮರ್ಜೆನ್ಸಿ', 'ತೇಜಸ್', 'ಚಂದ್ರಮುಖಿ 2', 'ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ' ಮತ್ತು 'ದಿ ಇನ್ಕಾರ್ನೇಷನ್: ಸೀತಾ' ​​ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.