ಬೆಂಗಳೂರು: ‘ಸಿನಿಮಾ ದೊಡ್ಡ ಪರದೆ ಮೇಲೆಯೇ ನೋಡುವುದಕ್ಕೆ ಚೆಂದ. ಸಿನಿಮಾದ ಅದ್ಭುತ ಮೇಕಿಂಗ್ ಕಾಣುವುದೇ ಪರದೆ ಮೇಲೆ. ಹೀಗಾಗಿ ಚಿತ್ರಮಂದಿರಗಳು ಸಂಪೂರ್ಣವಾಗಿ ತೆರೆದರಷ್ಟೇ ಪ್ರತೀ ಸಿನಿಮಾಗೂ ನ್ಯಾಯ ಸಿಗಲಿದೆ’ ಎಂದು ನಟ ಸುದೀಪ್ ಹೇಳಿದರು.
ನಟಿ ಪ್ರಿಯಾಂಕ ಉಪೇಂದ್ರ ನಟನೆಯ ‘1980’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ‘ಎರಡು ವರ್ಷದಿಂದ ಮನೆಯಲ್ಲಿ ಟಿ.ವಿ ನೋಡಿ ನೋಡಿ ದೊಡ್ಡ ಪರದೆಯಲ್ಲಿ ಟ್ರೇಲರ್ ನೋಡಿ ಬಹಳ ಖುಷಿ ಆಯಿತು. ಅದೂ ಮೊದಲ ಸಾಲಿನಲ್ಲಿ ಕೂತು ಸಿನಿಮಾ ನೋಡಿ ಬಹಳ ವರ್ಷಗಳೇ ಆಗಿದೆ. ಸಿನಿಮಾದವರಿಗೆ ಪರದೆ ಎನ್ನುವುದು ಬಹಳ ಮುಖ್ಯ. ಪ್ರಸ್ತುತ ಚಿತ್ರೋದ್ಯಮಕ್ಕೆ ಬಂದಿರುವ ಸಂಕಷ್ಟ ಆದಷ್ಟು ಬೇಗ ಬಗೆಹರಿಯಲಿ. ಚಿತ್ರಮಂದಿರಗಳು ತೆರೆದರಷ್ಟೇ ಪ್ರತೀ ಸಿನಿಮಾಗೂ ನ್ಯಾಯ ಸಿಗಲಿದೆ’ ಎಂದರು.
‘ಕನ್ನಡ ಸಿನಿಮಾದಲ್ಲಿ ಯಾವುದೇ ರೀತಿಯ ಹೊಸ ಪ್ರಯತ್ನ ಮಾಡಿದರೂ ಅದು ಅದ್ಭುತವೇ. ಅದಕ್ಕೆ ನ್ಯಾಯ ಸಿಗಬೇಕಾದರೆ ಚಿತ್ರಮಂದಿರಗಳು ತೆರೆಯಲೇಬೇಕು. ಒಳ್ಳೆಯ ದಿನಗಳು ಬರಲಿ ಎಂದು ಆಶಿಸುತ್ತೇನೆ. ನಾವೂ ನಮ್ಮ ಕಥೆಗಳನ್ನು ಹೇಳಲು ಪರದೆ ತೆರೆಯಲು ಕಾಯುತ್ತಿದ್ದೇವೆ’ ಎಂದರು ಸುದೀಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.