ADVERTISEMENT

ನಾನು ಕ್ಲಬ್‌ಹೌಸ್‌ನಲ್ಲಿಲ್ಲ: ನಕಲಿ ಖಾತೆ ಕುರಿತು ಎಚ್ಚರಿಸಿದ ಪೃಥ್ವಿರಾಜ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜೂನ್ 2021, 8:11 IST
Last Updated 8 ಜೂನ್ 2021, 8:11 IST
ನಕಲಿ ಕ್ಲಬ್‌ಹೌಸ್ ಖಾತೆ
ನಕಲಿ ಕ್ಲಬ್‌ಹೌಸ್ ಖಾತೆ   

ಬೆಂಗಳೂರು: ದಕ್ಷಿಣ ಭಾರತದ ಪ್ರಮುಖ ನಟರಲ್ಲಿ ಒಬ್ಬರಾದ ಪೃಥ್ವಿರಾಜ್ ಸುಕುಮಾರನ್ ತನ್ನ ಹೆಸರಿನಲ್ಲಿದ್ದ ನಕಲಿ ಕ್ಲಬ್‌ಹೌಸ್ ಖಾತೆ ಕುರಿತು ಎಚ್ಚರಿಕೆ ನೀಡಿದ್ದಾರೆ.

ನಾನು ಕ್ಲಬ್‌ಹೌಸ್ ಆ್ಯಪ್‌ನಲ್ಲಿ ಖಾತೆ ಹೊಂದಿಲ್ಲ, ಆದರೆ ಸೂರಜ್ ನಾಯರ್ ಎನ್ನುವ ವ್ಯಕ್ತಿ ನನ್ನ ಹೆಸರಿನಲ್ಲಿ ಕ್ಲಬ್‌ಹೌಸ್ ಖಾತೆ ಆರಂಭಿಸಿ, ನನ್ನ ಧ್ವನಿಯನ್ನು ಅನುಕರಿಸಿ ಜನರೊಡನೆ ಸಂಭಾಷಣೆ ಮಾಡುತ್ತಿದ್ದಾನೆ ಎಂದು ಪೃಥ್ವಿರಾಜ್ ಸುಕುಮಾರನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕ್ಲಬ್‌ಹೌಸ್‌ನಲ್ಲಿ ನಕಲಿ ಖಾತೆ ಜತೆಗೆ ಸೂರಜ್ ಅದರಲ್ಲಿ ಪೃಥ್ವಿರಾಜ್ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಲಿಂಕ್ ಕೂಡ ನೀಡಿದ್ದರಿಂದ ಜನರು ಕ್ಲಬ್‌ಹೌಸ್‌ನಲ್ಲಿರುವ ಖಾತೆ ಪೃಥ್ವಿರಾಜ್‌ನ ಅಧಿಕೃತ ಖಾತೆಯೆಂದೇ ತಿಳಿದಿದ್ದರು.

ADVERTISEMENT

ಪೃಥ್ವಿರಾಜ್ ಈ ಬಗ್ಗೆ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡ ಬೆನ್ನಲ್ಲೇ ಸೂರಜ್ ಕ್ಷಮೆ ಕೋರಿದ್ದಾನೆ. ಸೂರಜ್ ಕಳುಹಿಸಿದ ಮೆಸೇಜ್ ಸ್ಕ್ರೀನ್‌ಶಾಟ್ ಅನ್ನು ಕೂಡ ಪೃಥ್ವಿರಾಜ್ ಪೋಸ್ಟ್ ಮಾಡಿದ್ದು, ಮತ್ತೆ ಇಂತಹ ತಪ್ಪು ಮಾಡದಂತೆ ಎಚ್ಚರಿಸಿದ್ದಾರೆ.

ಜತೆಗೆ ಇಂತಹ ಕೆಲಸ ಮಾಡುವುದನ್ನು ಬಿಟ್ಟು, ಉದ್ಯೋಗ ಮತ್ತು ಭವಿಷ್ಯದ ಕಡೆಗೆ ಗಮನ ಹರಿಸುವಂತೆ ಕೂಡ ಸೂರಜ್‌ಗೆ ಪೃಥ್ವಿರಾಜ್ ಸಲಹೆ ನೀಡಿದ್ದಾರೆ.

ಚಿತ್ರನಟರು ಮತ್ತು ಸೆಲೆಬ್ರಿಟಿಗಳ ನಕಲಿ ಖಾತೆಗಳನ್ನು ರಚಿಸಿ, ಜನರನ್ನು ವಂಚಿಸುವುದು ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ. ಇತ್ತೀಚೆಗೆ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹೆಸರಿನಲ್ಲಿ ಕೂಡ ನಕಲಿ ಖಾತೆ ಸೃಷ್ಟಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.