ADVERTISEMENT

ಅಯೋಧ್ಯೆ: ರಾಮನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ –ನಿಕ್‌ ಜೋನಾಸ್‌ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮಾರ್ಚ್ 2024, 10:18 IST
Last Updated 20 ಮಾರ್ಚ್ 2024, 10:18 IST
<div class="paragraphs"><p>ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ, ಗಾಯಕ ನಿಕ್ ಜೋನಾಸ್‌ ಅಯೋಧ್ಯೆಯ ರಾಮ ಮಂದಿರಕ್ಕೆ&nbsp;ಭೇಟಿ ನೀಡಿದ್ದಾರೆ.</p></div>

ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ, ಗಾಯಕ ನಿಕ್ ಜೋನಾಸ್‌ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ.

   

ಅಯೋಧ್ಯೆ: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ ಗಾಯಕ ನಿಕ್ ಜೋನಾಸ್‌ ದಂಪತಿಯು ಮಗಳು ‘ಮಾಲತಿ ಮೇರಿ’ಯೊಂದಿಗೆ (Malti Marie) ಇಂದು (ಬುಧವಾರ) ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದು, ಬಾಲರಾಮನ ದರ್ಶನ ಪಡೆದಿದ್ದಾರೆ.

ಪ್ರಿಯಾಂಕಾ ಹಾಗೂ ನಿಕ್ 2018ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ಮದುವೆಯಾಗಿದ್ದರು. ಬಳಿಕ 2022ರ ಜನವರಿ 22ರಂದು ಪ್ರಿಯಾಂಕಾ –ನಿಕ್ ದಂಪತಿ ಬಾಡಿಗೆ ತಾಯಿಯ ಮೂಲಕ ಮಗು ಪಡೆದಿದ್ದರು.

ADVERTISEMENT

ಸದ್ಯ ಅಮೆರಿಕದಲ್ಲಿ ನೆಲೆಸಿರುವ ಪ್ರಿಯಾಂಕಾ ಅವರು ಹಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಬೇವಾಚ್‘, ‘ಎ ಕಿಡ್ ಲೈಕ್ ಜ್ಯಾಕ್‘, ‘ಇಸಂಟ್‌ ಇಟ್ ರೊಮ್ಯಾಂಟಿಕ್’ ಮತ್ತು ‘ವಿ ಕ್ಯಾನ್ ಬಿ ಹೀರೋಸ್‘ ಚಿತ್ರಗಳಲ್ಲಿ ಅಭಿನಯಿಸಿದ್ದರು.

ವರ್ಷಾರಂಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆದಿತ್ತು. ರಾಮಮಂದಿರಕ್ಕೆ ದೈನಂದಿನ ಸರಾಸರಿ ಒಂದರಿಂದ ಒಂದೂವರೆ ಲಕ್ಷ ಜನ ಭಕ್ತರು ಭೇಟಿ ನೀಡುತ್ತಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.