ಬೆಂಗಳೂರು: ಸೂಪರ್ ಸ್ವಾರ್ ರಜನಿಕಾಂತ್ ಅವರು ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಅವರ (ಪ್ರಧಾನಿ) ನಿವಾಸದಲ್ಲಿ ಇಂದು ಭೇಟಿ ಮಾಡಿದ್ದಾರೆ.
ರಜನಿಕಾಂತ್ ಅವರೊಂದಿಗಿನ ಭೇಟಿಯ ಫೋಟೊಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮಲೇಷಿಯಾ ಪ್ರಧಾನಿ, ರಜನಿಕಾಂತ್ ಅವರು ಏಷ್ಯಾ ಮತ್ತು ಅಂತರರಾಷ್ಟ್ರೀಯ ಕಲಾ ( ಸಿನಿಮಾ) ಪ್ರಪಂಚದಲ್ಲಿ ಹೆಸರು ಗಳಿಸಿದ್ದಾರೆಂದು ಶ್ಲಾಘಿಸಿದ್ದಾರೆ.
‘ಜನರ ಪರವಾದ ನನ್ನ ಹೋರಾಟಕ್ಕೆ ಅವರು (ರಜನಿ ಕಾಂತ್) ಬೆಂಬಲ ಸೂಚಿಸಿದ್ದನ್ನು ನಾನು ಪ್ರಶಂಸಿಸುತ್ತೇನೆ. ರಜನಿ ಅವರು ನಟಿಸಿರುವ ಚಿತ್ರಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ವಿರುದ್ಧ ಧ್ವನಿಗೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾನು (ಪ್ರಧಾನಿ) ಇಂತಹ ಜ್ವಲಂತ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದಿದ್ದಾರೆ.
ರಜನಿಕಾಂತ್ ಅವರು ಮತ್ತಷ್ಟು ಚಿತ್ರಗಳ ಮೂಲಕ ಸಿನಿಮಾ ಜಗತ್ತಿನಲ್ಲಿ ಮಿಂಚಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಸದ್ಯ ಇದೀಗ ರಜನಿಕಾಂತ್ ಅವರು ಇನ್ನೂ ಹೆಸರಿಡದ ತಮ್ಮ 171ನೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ವಿಕ್ರಮ್’ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನ ಮಾಡಲಿದ್ದು, ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.