ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ನೀಡಿರುವ ದೂರಿನ ಅನ್ವಯ ಮೈಸೂರು ಮೂಲದ ಅವರ ಪತಿ ಆದಿಲ್ ದುರಾನಿ ಅವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದುರಾನಿ ತಮ್ಮ ಫ್ಲಾಟ್‌ನಿಂದ ಹಣ ಮತ್ತು ಆಭರಣಗಳನ್ನು ತಮಗೆ ತಿಳಿಯದಂತೆ ಕಿತ್ತುಕೊಂಡಿದ್ದಾರೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ರಾಖಿ ಸಾವಂತ್ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ವರದಕ್ಷಿಣೆಗಾಗಿ ಕಿರುಕುಳ ನೀಡಿದ ಆರೋಪ ಹೊತ್ತಿರುವ ಉದ್ಯಮಿ ದುರಾನಿ ಅವರನ್ನು ವಿಚಾರಣೆಗಾಗಿ ಮುಂಬೈನ ಓಶಿವಾರಾ ಪೊಲೀಸ್ ಠಾಣೆಗೆ ಕರೆತಂದು ನಂತರ ಬಂಧಿಸಲಾಯಿತು ಎಂದು ಅವರು ಹೇಳಿದರು.
ಸೋಮವಾರ ತಡರಾತ್ರಿ ರಾಖಿ ಸಾವಂತ್ ತನ್ನ ಪತಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮಂಗಳವಾರ ವರದಕ್ಷಿಣೆ ಕಿರುಕುಳ ಮತ್ತು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೂರಿನ ಅನ್ವಯ ಸಾವಂತ್ 2022 ರ ಜನವರಿಯಲ್ಲಿ ದುರಾನಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದು, ಇಬ್ಬರೂ ಜಂಟಿ ವ್ಯವಹಾರ ಖಾತೆಯನ್ನು ತೆರೆದಿದ್ದಾರೆ. ತನಗೆ ತಿಳಿಯದೆ, ದುರಾನಿ ಕಾರು ಖರೀದಿಸಲು ಜೂನ್‌ನಲ್ಲಿ ಜಂಟಿ ಖಾತೆಯಿಂದ ₹1.5 ಕೋಟಿಗೂ ಹೆಚ್ಚು ಹಣವನ್ನು ಪಡೆದಿದ್ದಾನೆ. ಆದರೆ ಮದುವೆಯಾಗುವುದಾಗಿ ಭರವಸೆ ನೀಡಿದ್ದರಿಂದ ತಾನು ಅದನ್ನು ವಿರೋಧಿಸಲಿಲ್ಲ ಎಂದು ಸಾವಂತ್ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.