ಬೆಂಗಳೂರು: ಹುಬ್ಬಳ್ಳಿಯನಾಗಶೆಟ್ಟಿಕೊಪ್ಪದಲ್ಲಿ ಹುಟ್ಟಿ ಬೆಳೆದಿದ್ದಸತ್ಯಜಿತ್ ಅವರ ಮೂಲ ಹೆಸರುನಿಜಾಮುದ್ದೀನ್ ಎಂ.ಸೈಯದ್. ಆಟೊ, ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಅವರು 1975ರಲ್ಲಿ ಕೆಎಸ್‌ಆರ್‌ಟಿಸಿ ಧಾರವಾಡ ಡಿಪೋದಲ್ಲಿ ಚಾಲಕ ಹುದ್ದೆಗೆ ಸೇರಿದ್ದರು.
ಹವ್ಯಾಸಿ ರಂಗಭೂಮಿ ತಂಡದ ಜೊತೆಗೂಡಿ ಕಲಾಜೀವನ ಆರಂಭಿಸಿದ್ದರು. ನಾಟಕ ತಂಡದ ಸದಸ್ಯರೇನಿಜಾಮುದ್ದೀನ್ ಎಂ.ಸೈಯದ್ ಹೆಸರು ಉದ್ದವಾಯಿತೆಂದುಸತ್ಯಜಿತ್ ಎಂದು ನಾಮಕರಣ ಮಾಡಿದ್ದರು.ಸತ್ಯಜಿತ್ ಅವರ ಮೊದಲ ಸಿನಿಮಾ ‘ಅಂಕುಶ್’. ಬಾಲಿವುಡ್ ನಟ ನಾನಾ ಪಾಟೇಕರ್ ಅವರು ನಾಯಕರಾಗಿದ್ದ ಈ ಹಿಂದಿ ಚಿತ್ರ ತೆರೆಕಂಡಿದ್ದು 1986ರಲ್ಲಿ. ಇದರಲ್ಲಿಸತ್ಯಜಿತ್ ಖಳನಾಯಕನ ಪಾತ್ರ ನಿರ್ವಹಿಸಿದ್ದರು.
ಅಲ್ಲಿಂದಸತ್ಯಜಿತ್ ಅವರಿಗೆ ಕನ್ನಡ ಚಿತ್ರಗಳಲ್ಲಿ ಬೇಡಿಕೆ ಆರಂಭವಾಯಿತು. 1986ರಲ್ಲಿ ತೆರೆಕಂಡ ಕೆ.ವಿ.ಜಯರಾಮ್ ಅವರ ‘ಅರುಣರಾಗ’ ಚಿತ್ರದ ಮುಖಾಂತರ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ಅವರಿಗೆ ನಂತರ ಸಾಲು ಸಾಲು ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳು ಅರಸಿಕೊಂಡು ಬಂದಿದ್ದವು.
ಅನಂತನಾಗ್ ನಟನೆಯ ‘ವರ್ಣಚಕ್ರ’, ‘ತಾಯಿಗೊಬ್ಬ ಕರ್ಣ’, ‘ಬಂಧಮುಕ್ತ’, ‘ಪದ್ಮವ್ಯೂಹ’, ‘ಪುಟ್ನಂಜ’, ‘ಚೈತ್ರದ ಪ್ರೇಮಾಂಜಲಿ’, ‘ಅಪ್ಪು’, ‘ಅಭಿ’, ‘ಆಪ್ತಮಿತ್ರ’, ದರ್ಶನ್ ನಟನೆಯ ‘ದಾಸ’, ‘ಕುಟುಂಬ’ ಚಿತ್ರಗಳಲ್ಲಿಸತ್ಯಜಿತ್ ಅವರ ಪಾತ್ರ ಸಿನಿಪ್ರಿಯರ ಗಮನಸೆಳೆದಿದ್ದವು. ಅಂಬರೀಷ್ ಅವರು ನಾಯಕರಾಗಿ ನಟಿಸಿದ್ದ ‘ಅಂತಿಮ ತೀರ್ಪು’ ಚಿತ್ರದಲ್ಲಿನ ಪಾತ್ರಸತ್ಯಜಿತ್ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತು.
ರಾಜ್‌ಕುಮಾರ್ ಅವರ ಜೊತೆಗೆಸತ್ಯಜಿತ್ ನಟಿಸಿದ ಏಕೈಕ ಚಿತ್ರ ‘ಶಿವ ಮೆಚ್ಚಿದ ಕಣ್ಣಪ್ಪ’. ಹೀಗೆ ಸುಮಾರು ಮೂರು ದಶಕಗಳ ಕಾಲ ನೂರಾರು ಪಾತ್ರಗಳಿಗೆ ಜೀವತುಂಬಿದ್ದಸತ್ಯಜಿತ್ 650ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.
ನಿಧನ
ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ವಾರದ ಹಿಂದಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ಆರೋಗ್ಯದ ಸಮಸ್ಯೆಗಳ ಜೊತೆ 2016ರಲ್ಲಿ ಗ್ಯಾಂಗ್ರಿನ್‌ಗೆ ತುತ್ತಾಗಿ ಒಂದು ಕಾಲನ್ನು ಸತ್ಯಜಿತ್ ಕಳೆದುಕೊಂಡರು. ಬಳಿಕವೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದರು. ಚಿಕಿತ್ಸೆ ಫಲಿಸದೇ ಭಾನುವಾರ ನಿಧನರಾದರು.
ಅವರಿಗೆ ಪುತ್ರಿ ಹಾಗೂ ಪುತ್ರ ಇದ್ದಾರೆ. ಪುತ್ರಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಪುತ್ರ ಚಿತ್ರರಂಗದಲ್ಲಿ ತೊಡಗಿದ್ದಾರೆ.
ಬೆಳ್ಳಿತೆರೆಯ ಮೇಲೆ ಖಳ, ಪೊಲೀಸ್, ಪೋಷಕ ನಟನಾಗಿ ಸತ್ಯಜಿತ್ ಅವರನ್ನು ಕಾಣದವರು ಅಪರೂಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.