ಬೆಂಗಳೂರು: ನಟ ಶಾರುಕ್ ಖಾನ್ ಅವರು ತಮ್ಮ ಮಗ ಆರ್ಯನ್ ಖಾನ್ನ ಹೊಸ ಪ್ರೊಜೆಕ್ಟ್ ಅನ್ನು ದೊಡ್ಡದಾಗಿ ಘೋಷಿಸಿದ್ದಾರೆ.
ಶಾರುಕ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಹಾಗೂ ನೆಟ್ಫ್ಲಿಕ್ಸ್ ಇಂಡಿಯಾ ಹಿಂದಿಯಲ್ಲಿ ಹೊಸ ವೆಬ್ ಸಿರೀಸ್ ನಿರ್ಮಿಸುತ್ತಿರುವುದಾಗಿ ಶಾರುಕ್ ಘೋಷಿಸಿದ್ದಾರೆ.
ಇನ್ನೂ ವಿಶೇಷವೆಂದರೆ ಈ ವೆಬ್ ಸಿರೀಸ್ ಅನ್ನು ಕಥೆ ಬರೆದು ಸ್ವತಃ ಆರ್ಯನ್ ಖಾನ್ ಅವರೇ ನಿರ್ದೇಶಿಸುತ್ತಿದ್ದಾರೆ.
ಇಂದು ಶಾರುಕ್ ಅವರು ಎಕ್ಸ್ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು ಬಾಲಿವುಡ್ನಲ್ಲಿ ನಿರ್ಮಾಣವಾಗುತ್ತಿರುವ ಈ ಹೊಸ ವೆಬ್ ಸಿರೀಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಅಂತೂ ಶಾರುಕ್ ಖಾನ್ ಅವರು ತಮ್ಮ ಮಗ ಆರ್ಯನ್ ಖಾನ್ ದೊಡ್ಡದಾಗಿ ಮಿಂಚಲು ರೆಡಿಯಾಗಿದ್ದಾರೆ.
ಗೌರಿ ಖಾನ್ ಅವರು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಅಡಿ ಹೊಸ ವೆಬ್ ಸಿರೀಸ್ ಅನ್ನು ನಿರ್ಮಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.