ADVERTISEMENT

ಮತ್ತೆ ದ್ವಿಪಾತ್ರದಲ್ಲಿ ಉಪ್ಪಿ ಪಯಣ

​ಪ್ರಜಾವಾಣಿ ವಾರ್ತೆ
Published 18 ಮೇ 2019, 8:49 IST
Last Updated 18 ಮೇ 2019, 8:49 IST
ಉಪೇಂದ್ರ
ಉಪೇಂದ್ರ   

ಆರ್‌. ಚಂದ್ರು ನಿರ್ದೇಶನದ ‘ರಿಯಲ್‌ ಸ್ಟಾರ್’ ಉಪೇಂದ್ರ ನಟನೆಯ ‘ಐ ಲವ್‌ ಯು’ ಚಿತ್ರ ಜೂನ್‌ 14ರಂದು ಬಿಡುಗಡೆಯಾಗಲಿದೆ. ಈ ನಡುವೆಯೇ ಉಪ್ಪಿ ದ್ವಿಪಾತ್ರದಲ್ಲಿ ನಡೆಸಲು ತಯಾರಿ ನಡೆಸಿದ್ದಾರೆ.

ವಿಭಿನ್ನ ಗೆಟಪ್‌ಗಳು ಮತ್ತು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವುದು ಉಪ್ಪಿಗೆ ಹೊಸದೇನಲ್ಲ. ಈ ಹಿಂದೆ ಅವರು ‘ಹಾಲಿವುಡ್‌’ ಚಿತ್ರದಲ್ಲಿ ತ್ರಿಪಾತ್ರದಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದರು.‘ಸೂಪರ್ ಸ್ಟಾರ್’, ‘ಗಾಡ್ ಫಾದರ್’ ಮತ್ತು ‘ಉಪೇಂದ್ರ ಮತ್ತೆ ಬಾ’ ಚಿತ್ರದಲ್ಲಿ ದ್ವಿಪಾತ್ರದ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಿದ್ದರು.

ಮತ್ತೆ ಅವರು ದ್ವಿಪಾತ್ರದಲ್ಲಿ ನಟಿಸಲು ಸಜ್ಜಾಗಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಅಂದಹಾಗೆ ಟಿ.ಆರ್‌. ಚಂದ್ರಶೇಖರ್‌ ನಿರ್ಮಾಣದ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ ಎನ್ನುವುದು ಹೊಸ ಸುದ್ದಿ. ಕಳೆದ ವರ್ಷವೇ ಈ ಚಿತ್ರ ಸೆಟ್ಟೇರಬೇಕಿತ್ತು. ಇದೇ 24ರಂದು ಸಿನಿಮಾದ ಮುಹೂರ್ತ ನಡೆಯಲಿದೆ. ಡಿ.ಎನ್‌. ಮೌರ್ಯ ಈ ಸಿನಿಮಾ ನಿರ್ದೇಶಿಸಲಿದ್ದಾರೆ.

ADVERTISEMENT

ಈ ಚಿತ್ರದ ಒಂದು ಪಾತ್ರದಲ್ಲಿ ಅವರು ತತ್ವಜ್ಞಾನಿಯಾಗಿ ನಟಿಸಲಿದ್ದಾರಂತೆ. ಮತ್ತೊಂದು ಪಾತ್ರದ ಬಗ್ಗೆ ಚಿತ್ರತಂಡ ರಹಸ್ಯ ಕಾಯ್ದುಕೊಂಡಿದೆ. ಸಿನಿಮಾಕ್ಕೆ ‘ಪಿತಾಮಹ’ ಎಂದು ಹೆಸರಿಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.