ಚಂದನವನದಗೋಲ್ಡನ್ ಕ್ವೀನ್ ಖ್ಯಾತಿಯ ನಟಿಅಮೂಲ್ಯ ಮಕ್ಕಳಜೊತೆ ಮೊದಲ ಬಾರಿ ಫೋಟೊವನ್ನು ಹಂಚಿಕೊಂಡಿದ್ದಾರೆ.
ಮಕ್ಕಳಫೋಟೊ ಹಂಚಿಕೊಂಡಿರುವುದಕ್ಕೆ ಕೆಲ ಅಭಿಮಾನಿಗಳು ಖುಷಿಯಾಗಿದ್ದಾರೆ. ಮತ್ತೆ ಕೆಲವರು ಮಕ್ಕಳ ಮುಖ ತೋರಿಸಿಲ್ಲ ಎಂದು ಕೆಲವರು ಬೇಸರದಿಂದ ಕಾಮೆಂಟ್ ಮಾಡಿದ್ದಾರೆ.
ಅಮೂಲ್ಯ ಮಾರ್ಚ್ ತಿಂಗಳಲ್ಲಿ ಅವಳಿ (ಗಂಡು) ಮಕ್ಕಳಿಗೆ ಜನ್ಮ ನೀಡಿದ್ದರು. ಅವರು ಮಕ್ಕಳ ಮುಖವನ್ನು ತೋರಿಸದೆ,ಕಾಲುಗಳು ಇರುವ ಫೋಟೊ ಹಂಚಿಕೊಂಡಿದ್ದಾರೆ. ತನ್ನ ಗಲ್ಲದ ಮೇಲೆ ಮಕ್ಕಳ ಕಾಲುಗಳನ್ನು ಇರಿಸಿದ ಫೋಟೊ ಇದಾಗಿದೆ.
ಕೌಟುಂಬಿಕ ಜೀವನದಲ್ಲಿ ಅಮೂಲ್ಯ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಸಿನಿಮಾರಂಗದಿಂದ ಅವರು ದೂರವಾಗಿದ್ದಾರೆ. ಆದರೆ ಅವರುಸಾಮಾಜಿಕ ಜಾಲತಣದಲ್ಲಿ ಸದಾ ಸಕ್ರಿಯವಾಗಿ ಅಭಿಮಾನಿಗಳಿಗೆ ಹತ್ತಿರವಾಗಿ ಇರುತ್ತಾರೆ. ಫೋಟೊ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮ್ಮ ಜೀವನದ ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಅಮೂಲ್ಯ, 'ಚೆಲುವಿನ ಚಿತ್ತಾರ' ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದರು.ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯಂ, ಗಜಕೇಸರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
2017ರಲ್ಲಿ ಜಗದೀಶ್ ಅವರನ್ನು ಮದುವೆಯಾದರು. ಮದುವೆಯ ಬಳಿಕ ಅವರು ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.