ADVERTISEMENT

ಹೇಮಾ ಮಾಲಿನಿ ಪುತ್ರಿ ಇಶಾ ದೆವೋಲ್ 11 ವರ್ಷಗಳ ದಾಂಪತ್ಯ ಅಂತ್ಯ

ಪಿಟಿಐ
Published 7 ಫೆಬ್ರುವರಿ 2024, 13:38 IST
Last Updated 7 ಫೆಬ್ರುವರಿ 2024, 13:38 IST
<div class="paragraphs"><p>ಇಶಾ ದೆವೋಲ್– ಭರತ್ ತಖ್ತಾನಿ</p></div>

ಇಶಾ ದೆವೋಲ್– ಭರತ್ ತಖ್ತಾನಿ

   

ಚಿತ್ರಕೃಪೆ–ಇನ್‌ಸ್ಟಾಗ್ರಾಮ್

ಮುಂಬೈ: ನಟಿ ಇಶಾ ದೆವೋಲ್ ಹಾಗೂ ಉದ್ಯಮಿ ಭರತ್ ತಖ್ತಾನಿ ಅವರು 11 ವರ್ಷಗಳ ತಮ್ಮ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ. ಇಬ್ಬರು ‍ಪರಸ್ಪರ ಮತ್ತು ಸೌಹಾರ್ದಯುತವಾಗಿ ಬೇರೆಯಾಗಿದ್ದೇವೆ ಎಂದು ಇಂದು ( ಬುಧವಾರ) ಖಚಿತಪಡಿಸಿದ್ದಾರೆ.

ADVERTISEMENT

ಇವರಿಬ್ಬರು ಬೇರ್ಪಟ್ಟಿದ್ದಾರೆಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಆದರೆ ಇದೀಗ ಇಬ್ಬರು ತಮ್ಮ ವೈವಾಹಿಕ ಜೀವನ ಅಂತ್ಯವಾಗಿರುವುದರ ಬಗ್ಗೆ ಅಧಿಕೃತವಾಗಿ ಧೃಡಪಡಿಸಿದ್ದಾರೆ.

'ನಾವು ಪರಸ್ಪರ ಹಾಗೂ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಜೀವನದಲ್ಲಿ ಈ ಬದಲಾವಣೆಯ ಮೂಲಕ ನಮ್ಮ ಇಬ್ಬರು ಹೆಣ್ಣು ಮಕ್ಕಳಾದ ರಾಧ್ಯಾ ಹಾಗೂ ಮಿರಾಯಾ ಅವರ ಭವಿಷ್ಯದ ಕಾಳಜಿ ವಹಿಸುವುದು ಅತ್ಯಂತ ಮಹತ್ವದ್ದಾಗಿದೆ. ನಾವು ನಮ್ಮ ದಾಂಪತ್ಯ ಜೀವನದ ಗೌಪ್ಯತೆಯನ್ನು ಗೌರವಿಸುತ್ತೇವೆ' ಎಂದು ಇಬ್ಬರು (ಇಶಾ – ಭರತ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ನಟಿ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್, 2012ರ  ಜೂನ್ 29 ರಂದು ಭರತ್ ತಖ್ತಾನಿ ಅವರನ್ನು ವಿವಾಹವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.