ಬೆಂಗಳೂರು: ಬಾಲಿವುಡ್ ನಟಿ ಕಾಜೊಲ್ ಅವರಿಗೆ ಕೋವಿಡ್–19 ದೃಢಪಟ್ಟಿದ್ದು, ಈ ಸಮಯದಲ್ಲಿ ತಮ್ಮ ಮಗಳಿಂದ ದೂರ ಇರಬೇಕಾದ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಮಗಳು ನ್ಯಾಸಾ ದೇವಗನ್ ಫೋಟೊ ಹಂಚಿಕೊಂಡಿರುವ ಕಾಜೊಲ್, ತನಗೆ ಕೋವಿಡ್ ಪಾಸಿಟಿವ್ ಆಗಿರುವುದನ್ನು ತಿಳಿಸಿದ್ದಾರೆ. 'ನೆಗಡಿಯಿಂದಾಗಿ ಕೆಂಪೇರಿರುವ ನನ್ನ ಮೂಗನ್ನು ಯಾರಿಗೂ ತೋರಲು ಇಷ್ಟವಿಲ್ಲ, ಹಾಗಾಗಿ ಜಗತ್ತಿನ ಅತ್ಯಂತ ಮುದ್ದಾದ ನಗು ನಿಮಗೆ!' ಎಂದು ಪ್ರಕಟಿಸುವ ಮೂಲಕ ಮಗಳಿಂದ ದೂರ ಉಳಿಯಬೇಕಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಜೊಲ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಹಾಗೂ ಕಲಾವಿದರು, ಶೀಘ್ರ ಗುಣಮುಖರಾಗುವಂತೆ ಕೋರಿದ್ದಾರೆ. ಹಾಗೇ ನ್ಯಾಸಾಳ ಸೌಂದರ್ಯವನ್ನು ಹೊಗಳಿ ಕಾಮೆಂಟ್ ಮಾಡಿದ್ದಾರೆ.
18 ವರ್ಷ ವಯಸ್ಸಿನ ನ್ಯಾಸಾ ಈಗ ಸ್ವಿಡ್ಜರ್ಲೆಂಡ್‌ನ ಗ್ಲಿಯಾನ್ ಇನ್‌ಸ್ಟಿಟ್ಯೂಟ್‌ನಲ್ಲಿ 'ಇಂಟರ್‌ನ್ಯಾಷನಲ್ ಹಾಸ್ಪಿಟಾಲಿಟಿ' ಅಧ್ಯಯನ ಮಾಡುತ್ತಿದ್ದಾಳೆ. ಕಾಜೊಲ್ ಅವರಿಗೆ ಇಬ್ಬರು ಮಕ್ಕಳು, ಮಗಳು ನ್ಯಾಸಾ ಮತ್ತು ಮಗ ಯುಗ್.
ಕಾಜೊಲ್ ಅವರ ಮುಂದಿನ ಸಿನಿಮಾ, ತಾಯಿಯೊಬ್ಬಳು ಎದುರಿಸುವ ಸವಾಲುಗಳ ಕಥೆಯನ್ನು ಒಳಗೊಂಡಿರುವ 'ದ ಲಾಸ್ಟ್ ಹುರ್‍ರಾಹ್'.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.