ADVERTISEMENT

ಲೀಲಾವತಿ ಅಂತಿಮ ದರ್ಶನ: ಹಿರಿಯ ನಟಿ ನೆನೆದು ಅಭಿಮಾನಿಗಳ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 4:15 IST
Last Updated 9 ಡಿಸೆಂಬರ್ 2023, 4:15 IST
<div class="paragraphs"><p>ಲೀಲಾವತಿ ಅಂತಿಮ ದರ್ಶನ</p></div>

ಲೀಲಾವತಿ ಅಂತಿಮ ದರ್ಶನ

   

ನೆಲಮಂಗಲ(ಬೆಂಗಳೂರು ಗ್ರಾಮಾಂತರ): ಬಹುಭಾಷಾ ತಾರೆ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಅಂಬೇಡ್ಕರ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಹರಿದುಬರುತ್ತಿರುವ ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ನೆಚ್ಚಿನ ನಟಿಗೆ ಅಭಿಮಾನಿಗಳು ಕಣ್ಣೀರಿನ ವಿದಾಯ ಹೇಳುತ್ತಿದ್ದಾರೆ.

ADVERTISEMENT

ಸೋಲದೇವನಹಳ್ಳಿ, ಮೆಲ್ಲಹಳ್ಳಿ, ನೆಲಮಂಗಲ, ದಾಬಸ್‌ಪೇಟೆ ಸೇರಿದಂತೆ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಲೀಲಾವತಿ ಅವರ ನಟನೆ, ಸಾಮಾಜಿಕ ಕಾರ್ಯ, ಪ್ರಾಣಿಗಳ ಮೇಲಿನ ಪ್ರೀತಿ ನೆನಪಿಸಿಕೊಂಡು ಭಾವುಕರಾಗುತ್ತಿದ್ದಾರೆ. ಲೀಲಾವತಿ ಅಮ್ಮನ ಹೋರಾಟದ ಬದುಕನ್ನು ನೆನದು ಕಂಬನಿ ಮಿಡಿಯುತ್ತಿದ್ದಾರೆ.

ತಾಯಿ ಪಾರ್ಥಿವ ಶರೀರದ ಪಕ್ಕದಲ್ಲೇ ಕುಳಿತಿರುವ ವಿನೋದ್ ರಾಜ್ ಅವರ ಕಣ್ಣೀರು ಆರುತ್ತಿಲ್ಲ.‌ ಬಂದ ಅಭಿಮಾನಿಗಳು ಸಂತೈಸಿದರೂ ಗಳಗಳನೆ ಅಳುತ್ತಿದ್ದಾರೆ. ಬೆಳಿಗ್ಗೆ 5ರಿಂದಲೇ ಅಭಿಮಾನಿಗಳು ಮೈದಾನದತ್ತ ಬರಲು ಆರಂಭಿಸಿದ್ದು ಕಾಲಕಳೆದಂತೆ ಸರದಿ ದೊಡ್ಡದಾಗುತ್ತಿದೆ.

ರವೀಂದ್ರ ಕಲಾಕ್ಷೇತದತ್ತ ಪಾರ್ಥಿವ ಶರೀರ

ನೆಲಮಂಗಲ: ನಟಿ ಲೀಲಾವತಿ ಅವರ ಪಾರ್ಥಿವ ಶರೀರವನ್ನು ನೆಲಮಂಗಲದ ಅಂಬೇಡ್ಕರ್ ಮೈದಾನದಿಂದ ಬೆಳಿಗ್ಗೆ 10.30ರ ಸುಮಾರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ಕೊಂಡೊಯ್ಯಲಾಗುತ್ತದೆ.

ಸ್ಥಳದಲ್ಲಿ ಆಂಬುಲೆನ್ಸ್ ಸಿದ್ಧವಾಗಿದೆ.

ನೆಲಮಂಗಲ ಕ್ರಾಸ್, ದಾಸನಪುರ, ಮಾಕಳಿ, ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ, ಪೀಣ್ಯ, ಗೊರಗುಂಟೆಪಾಳ್ಯ, ಯಶವಂತರಪುರ ಮಾರ್ಗವಾಗಿ ಆಂಬುಲೆನ್ಸ್ ರವೀಂದ್ರ ಕಲಾಕ್ಷೇತ್ರಕ್ಕೆ ತೆರಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.