ADVERTISEMENT

ಬಹುಭಾಷಾ ನಟಿ ಲೀಲಾವತಿ ನಿಧನ: ಕಣ್ಣೀರು ಹಾಕಿದ ‘ಕರಿಯ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 10:41 IST
Last Updated 9 ಡಿಸೆಂಬರ್ 2023, 10:41 IST
<div class="paragraphs"><p>ನಟಿ ಲೀಲಾವತಿ ಅವರ ಸಾಕುನಾಯಿ ಕರಿಯ ನೆಲಮಂಗಲ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ ಪಡೆಯುತ್ತಿರುವ ಕ್ಷಣ .</p></div>

ನಟಿ ಲೀಲಾವತಿ ಅವರ ಸಾಕುನಾಯಿ ಕರಿಯ ನೆಲಮಂಗಲ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ ಪಡೆಯುತ್ತಿರುವ ಕ್ಷಣ .

   

ಬೆಂಗಳೂರು: ಬಹುಭಾಷಾ ನಟಿ ಲೀಲಾವತಿ ಅವರಿಗೆ ಪ್ರಾಣಿ–ಪಕ್ಷಿಗಳೆಂದರೆ ಅಚ್ಚುಮೆಚ್ಚು. ಮನೆಯಲ್ಲಿ ಜಾನುವಾರುಗಳನ್ನು ಸಾಕುವ ಜೊತೆಗೆ ಶ್ವಾನಗಳನ್ನೂ ಸಾಕಿದ್ದರು. ಲೀಲಮ್ಮನಿಗೆ ‘ಕರಿಯ’ (ಬ್ಲ್ಯಾಕಿ) ಶ್ವಾನ ಎಂದರೆ ಬಹಳ ಇಷ್ಟ. ಲೀಲಾವತಿ ಅವರನ್ನು ಕಳೆದುಕೊಂಡಿದ್ದ ‘ಕರಿಯ’ ಶ್ವಾನ ಕಣ್ಣೀರು ಹಾಕುತ್ತಿದೆ

ನೆಲಮಂಗಲದ ಅಂಬೇಡ್ಕರ್‌ ಮೈದಾನದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಗೆ ಮುದ್ದಿನ ಕರಿಯನನ್ನು ಕರೆತರಲಾಗಿತ್ತು. ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ರವಾನೆ ಮಾಡುವುದಕ್ಕೂ ಮುನ್ನ ಲೀಲಮ್ಮನ ದರ್ಶನ ಪಡೆದ ‘ಕರಿಯ’ ಕಣ್ಣೀರು ಹಾಕಿತು.

ಪಾರ್ಥಿವ ಶರೀರವನ್ನು ಒಮ್ಮೆ ದಿಟ್ಟಿಸಿ ನೋಡಿ, ಮೌನವಾಯಿತು. ಪಕ್ಕದಲ್ಲಿದ್ದ ವಿನೋದ್‌ ರಾಜ್‌ ಅವರು ಶ್ವಾನವನ್ನು ಮುದ್ದಾಡಿ ಮೈದಡವಿದರು. ಪ್ರೀತಿಯ ಶ್ವಾನವನ್ನು ಸಂತೈಸಿದರು. ಕರಿಯನ ಸ್ಥಿತಿಕಂಡು ಭದ್ರತಾ ಕೆಲಸಕ್ಕೆ ನಿಯೋಜಿಸಲಾಗಿದ್ದ ಪೊಲೀಸರೂ ಆ ಕ್ಷಣದಲ್ಲಿ ಭಾವುಕರಾದರು.

‘ಶುಕ್ರವಾರ ಸಂಜೆಯಿಂದಲೂ ‘ಕರಿಯ’ ಊಟ ಸೇವಿಸುತ್ತಿಲ್ಲ. ಸೋಲದೇವನಹಳ್ಳಿಯ ಮನೆಯಲ್ಲೂ ಒಂದೇ ಸಮನೆ ಬೊಗಳುತ್ತಿದೆ’ ಎಂದು ತೋಟದ ಮನೆ ಕಾರ್ಮಿಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.