ADVERTISEMENT

ಮೊದಲ ಮಗುವಿನ ನಿರೀಕ್ಷೆಯಲ್ಲಿ ಮಿಲನಾ ನಾಗರಾಜ್–ಡಾರ್ಲಿಂಗ್ ಕೃಷ್ಣ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2024, 7:53 IST
Last Updated 8 ಮಾರ್ಚ್ 2024, 7:53 IST
<div class="paragraphs"><p>ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್</p></div>

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್

   

ಬೆಂಗಳೂರು: ಚಂದನವನದ ತಾರೆಯರಾದ ನಟಿ ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಬಗ್ಗೆ ಮಿಲನಾ ನಾಗರಾಜ್‌ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

ADVERTISEMENT

ಇನ್‌ಸ್ಟಾಗ್ರಾಂನಲ್ಲಿ 'Krissmi Baby' ಎಂದು ಬರೆದುಕೊಂಡಿರುವ ಮಗುವಿನ ಟೀಶರ್ಟ್ ಫೋಟೋ ಹಂಚಿಕೊಂಡಿರುವ ಮಿಲನಾ, ‘ನಮ್ಮಿಬ್ಬರನ್ನು ಆಶೀರ್ವದಿಸಿ’ ಎಂದು ಹೇಳಿದ್ದಾರೆ. ಅಲ್ಲದೇ ಸೆಪ್ಟೆಂಬರ್‌ನಲ್ಲಿ ಮಗುವಿನ ಆಗಮನವಾಗುವುದು ಎಂದು ಕೂಡ ಹೇಳಿದ್ದಾರೆ.

ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ 3 ವರ್ಷಗಳ ಹಿಂದೆ ಪ್ರೇಮಿಗಳ ದಿನದಂದು ವಿವಾಹವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.