ADVERTISEMENT

‘ದಿ ವ್ಯಾಕ್ಸಿನ್ ವಾರ್’ ಸೆಟ್‌ನಲ್ಲಿ ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿಗೆ ಗಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2023, 5:10 IST
Last Updated 17 ಜನವರಿ 2023, 5:10 IST
ವಿವೇಕ್ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ
ವಿವೇಕ್ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ   

ನವದೆಹಲಿ: 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಪತ್ನಿ ಪಲ್ಲವಿ ಜೋಶಿ ಅವರು ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ.

ವಿವೇಕ್ ಅಗ್ನಿಹೋತ್ರಿ ನಟನೆಯ ಬಹು ನಿರೀಕ್ಷಿತ ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಪಲ್ಲವಿ ಜೋಶಿ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಸೆಟ್‌ಗೆ ತೆರಳಿದ್ದರು. ಆಗ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗಿದೆ. ಈ ವೇಳೆ ಅವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಸದ್ಯ ಪಲ್ಲವಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ದಿ ವ್ಯಾಕ್ಸಿನ್ ವಾರ್’ಚಿತ್ರವು ಕೋವಿಡ್ ಲಸಿಕೆ ಕಂಡುಹಿಡಿಯಲು ಎರಡು ವರ್ಷಗಳ ಕಾಲ ಹಗಲು ರಾತ್ರಿ ದುಡಿದ ಭಾರತೀಯ ವಿಜ್ಞಾನಿಗಳು ಮತ್ತು ಸಿಬ್ಬಂದಿಯ ಕಥಾಹಂದರವನ್ನು ಒಳಗೊಂಡಿದೆ.

ವಿವೇಕ್ ಅಗ್ನಿಹೋತ್ರಿ ಅವರ ಪತ್ನಿ, ನಟಿ ಪಲ್ಲವಿ ಜೋಶಿ ಅವರ ‘ಐ ಆ್ಯಮ್ ಬುದ್ಧ ಪ್ರೊಡಕ್ಷನ್ಸ್ ಮತ್ತು ಅಭಿಷೇಕ್ ಅಗರ್‌ವಾಲ್ ಅವರ ‘ಅಭಿಷೇಕ್ ಅಗರ್‌ವಾಲ್ ಆರ್ಟ್ಸ್’ನಿಂದ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. 2023ರ ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಚಿತ್ರವನ್ನು ಥಿಯೇಟರ್‌ಗಳಿಗೆ ತರಲು ನಿರ್ಮಾಪಕರು ನಿರ್ಧರಿಸಿದ್ದಾರೆ. 11 ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಪ್ರಮುಖ ಪಾತ್ರದಲ್ಲಿ ಕಾಂತಾರ ಬೆಡಗಿ ಸಪ್ತಮಿ ಗೌಡ
ನಟಿ ಸಪ್ತಮಿ ಗೌಡ ಅವರು ‘ಪಾಪ್​ಕಾರ್ನ್ ಮಂಕಿ ಟೈಗರ್​’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ‘ಕಾಂತಾರ’ ಅವರ ಎರಡನೇ ಸಿನಿಮಾ. ಈ ಚಿತ್ರದಿಂದ ಅವರು ಪ್ಯಾನ್ ಇಂಡಿಯಾ ನಾಯಕಿ ಆಗಿ ಮಿಂಚಿದರು. ಹೀಗಾಗಿ, ಪರಭಾಷೆಗಳಿಂದ ಅವರಿಗೆ ಆಫರ್ ಬರುತ್ತಿದೆ. ಈಗ ಅವರು ‘ದಿ ವ್ಯಾಕ್ಸಿನ್ ವಾರ್​’ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಅವರ ಪಾತ್ರ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.