ಮುಂಬೈ: ಬಾಲಿವುಡ್‌ನ ರೂಪದರ್ಶಿ, ನಟಿ ಪೂನಂ ಪಾಂಡೆ (32) ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಪೂನಂ ಪಾಂಡೆ, ಹಾಟ್ ಲುಕ್ ಫೋಟೊಗಳಿಂದಲೇ ಹೆಚ್ಚು ಹೆಸರು ಮಾಡಿದ್ದರು.
ಪೂನಂ ಪಾಂಡೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 15 ಲಕ್ಷ ಪಾಲೋವರ್ಸ್‌ಗಳಿದ್ದಾರೆ.
ಸಿನಿಮಾಗಳಿಂದ ಮಾತ್ರವಲ್ಲದೆ ಪೂನಂ ಪಾಂಡೆ ಅವರು ಹಲವು ವಿವಾದಗಳಿಂದಲೂ ಸುದ್ದಿಯಾಗಿದ್ದರು.
2011 ರ ವಿಶ್ವಕಪ್ ವೇಳೆ ನೀಡಿದ್ದ ಹೇಳಿಕೆ
ಭಾರತ 2011ರ ವಿಶ್ವಕಪ್ ಗೆದ್ದರೆ ತಂಡದ ಎದುರು ನಗ್ನವಾಗಿ ಕಾಣಿಸಿಕೊಳ್ಳುತ್ತೇನೆ ಎಂದು ಪೂನಂ ಪಾಂಡೆ ಹೇಳಿಕೆ ನೀಡಿದ್ದರು. ಭಾರತ ಆ ಸಲ ವಿಶ್ವಕಪ್ ಗೆದ್ದಿತ್ತು. ಆದರೆ ಪೋಷಕರು ಮತ್ತು ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅವರು ತಮ್ಮ ನಿರ್ಣಯದಿಂದ ಹಿಂದೆ ಸರಿದಿದ್ದರು.
ಐಪಿಎಲ್ ವೇಳೆ ಫೋಟೊಶೂಟ್
ವಿಶ್ವಕಪ್ ವೇಳೆ ನೀಡಿದ್ದ ಹೇಳಿಕೆಯನ್ನು ಪೂರೈಸಲು ಬಿಸಿಸಿಐ ತಡೆಯೊಡ್ಡಿದ್ದಕ್ಕೆ ಪೂನಂ ಪಾಂಡೆ ಬೇಸರ ವ್ಯಕ್ತಪಡಿಸಿದ್ದರು. ಮುಂದಿನ ವರ್ಷ, ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಟ್ರೋಫಿಯನ್ನು ಗೆದ್ದರೆ ನಗ್ನವಾಗುವುದಾಗಿ ಹೇಳಿದ್ದರು. ಆ ವರ್ಷ ಕೆಕೆಆರ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಸಾಮಾಜಿಕ ಮಾಧ್ಯಮದಲ್ಲಿ ನಗ್ನ ಫೋಟೋವನ್ನೂ ಪೋಸ್ಟ್ ಮಾಡಿದ್ದರು.
ಕೋವಿಡ್ ಲಾಕ್‌ಡೌನ್ ವೇಳೆ ಬಂಧನ
ಕೊವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಪೂನಂ ಪಾಂಡೆ ಪತಿಯೊಂದಿಗೆ ಹೊರಗಡೆ ತಿರುಗಾಡಿದ್ದ ಆರೋಪಕ್ಕಾಗಿ ಪೂನಂ ದಂಪತಿಯನ್ನು ಮುಂಬೈ ಪೊಲಿಸರು ಬಂಧಿಸಿದ್ದರು. ಇವರ ವರ್ತನೆಗೆ ಸಾಮಾಜಿಕ ಜಾಲತಾಣಲದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಪೂನಂ ಪಾಂಡೆ ಆ್ಯಪ್‌ಗೆ ಗೂಗಲ್ ನಿರ್ಬಂಧ
‘ಪಾಂಡೆ ಆ್ಯಪ್’ ಎನ್ನುವ ಆ್ಯಪ್‌ಅನ್ನು 2017ರಲ್ಲಿ ಬಿಡುಗಡೆ ಮಾಡಿದ್ದರು. ಆ್ಯಪ್‌ನಲ್ಲಿ ತಮ್ಮದೇ ಮಾದಕ ಚಿತ್ರಗಳನ್ನು ಹರಿಯಬಿಟ್ಟು ತನ್ನ ಮಾರ್ಗಸೂಚಿಗಳ ಉಲ್ಲಘಿಸಿದೆ ಎಂದು ಆರೋಪಿಸಿದ ಗೂಗಲ್ ಆ್ಯಪ್ ಬಿಡುಗಡೆಗೊಳಿಸಿ ಒಂದೇ ಗಂಟೆಯಲ್ಲಿ ಗೂಗಲ್ ಪ್ಲೇಸ್ಟೋರ್‌ನಿಂದ ತೆಗೆದುಹಾಕಿತ್ತು
ಪತಿಯ ವಿರುದ್ಧ ಶೋಷಣೆ ಆರೋಪ
2021ರಲ್ಲಿ ಪೂನಂ ಪಾಂಡೆ ಪತಿಯ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ನೀಡಿದ್ದರು. ಇದರಿಂದಾಗಿ ಪೂನಂ ಪತಿ ಸಾಮ್ ಬಾಂಬೆ ಬಂಧನವಾಗಿದ್ದರು. ‘ಲಾಕ್ ಅಪ್’ ಎನ್ನುವ ರಿಯಾಲಿಟಿ ಶೋ ಸಮಯದಲ್ಲಿ, ಅವರು ತಮ್ಮ ಮದುವೆಯಲ್ಲಿ ಅನುಭವಿಸಿದ ಕೌಟುಂಬಿಕ ಹಿಂಸೆಯ ಬಗ್ಗೆ ಬಹಿರಂಗಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.