ಬೆಂಗಳೂರು: ನ್ಯಾಷನಲ್ ಕ್ರಷ್ ಎನಿಸಿಕೊಂಡಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ಸಿನಿಮಾಗಳಲ್ಲಿ ಹೆಸರುಗಳಿಸಿದಷ್ಟೇ ಫ್ಯಾಷನ್ ಲೋಕದಲ್ಲಿ ಅಲೆ ಸೃಷ್ಟಿಸುವಲ್ಲಿ ರಶ್ಮಿಕಾ ಮುಂಚೂಣಿಯಲ್ಲಿರುತ್ತಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕೇರಳದ ಕೊಲ್ಲಂಗೆ ಭೇಟಿ ನೀಡಿದ್ದ ರಶ್ಮಿಕಾ, ಗಾಢ ಹಸಿರು ಬಣ್ಣದ ತೋರಣಿ ಸೀರೆಯುಟ್ಟಿದ್ದರು. ಹಸಿರು ಸೀರೆಯ ಮೇಲೆ ಚಿನ್ನದ ಎಳೆಗಳ ಹೂವಿನ ಕಸೂತಿಯಿದೆ. ಸದ್ಯ ಫ್ಯಾಷನ್ ದುನಿಯಾದಲ್ಲಿ ಇದೇ ಟ್ರೆಂಡ್.
ಸೀರೆಯೊಂದಿಗೆ ‘ಆರ್‌ಎಮ್’ ಎಂದು ಬರೆದಿರುವ ಹೃದಯದಾಕಾರದ ಪೊಟ್ಲಿ ಬ್ಯಾಗ್ ಹಿಡಿದಿರುವುದು ರಶ್ಮಿಕಾ ಲುಕ್‌ಗೆ ಇನ್ನಷ್ಟು ಮೆರುಗು ನೀಡಿದೆ. ಜತೆಗೆ ಚಿನ್ನದ ಆಭರಣಗಳು, ಕೂದಲನ್ನು ಗಂಟು ಹಾಕಿರುವ ರೆಟ್ರೊ ಹೇರ್‌ಸ್ಟೈಲ್ ಅದಕ್ಕೆ ನಾಲ್ಕು ಕೆಂಪು ಗುಲಾಬಿ ರಶ್ಮಿಕಾರ ಅಂದ ಇಮ್ಮಡಿಯಾಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.