ಬೆಂಗಳೂರು: ‘ಊ ಅಂತಾವಾ‘ ಎಂದು ‘ಪುಷ್ಪ‘ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಡ್ಯಾನ್ಸ್ ಮಾಡುವ ಮೂಲಕ ಸಿನಿರಸಿಕರ ಮನ ಗೆದ್ದಿದ್ದ ನಟಿ ಸಮಂತಾ ರುತ್ ಪ್ರಭು, ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ಜಿಮ್‌ಗೆ ಲಗ್ಗೆ ಇಟ್ಟಿದ್ದಾರೆ.
ಕ್ರಿಸ್‌ಮಸ್ ಟ್ರೀ ಸಮೀಪದಲ್ಲಿ ನಿಂತುಕೊಂಡು, ಹೃದಯದಾಕಾರದಲ್ಲಿ ಕೈ ಹಿಡಿದು ‘ಮೆರ್ರಿ ಕ್ರಿಸ್‌ಮಸ್‘ ಎಂದು ಅಭಿಮಾನಿಗಳಿಗೆ ಶುಭಕೋರಿದ್ದ ಸಮಂತಾ, ನಂತರ ಜಿಮ್‌ಗೆ ತೆರಳಿದ್ದಾರೆ. ಈ ಕುರಿತು ಅವರು ಇನ್‌ಸ್ಟಾಗ್ರಾಮ್ಸ್ಟೋರೀಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಟಿಯಾಗಿ, ಫಿಟ್ನೆಸ್ ಕಾಯ್ದುಕೊಳ್ಳುವುದು ಮತ್ತು ಸದಾ ಕ್ರಿಯಾಶೀಲರಾಗಿರುವುದು ಅವರಿಗೆ ಅಗತ್ಯವೂ ಹೌದು.
ನಾಗ ಚೈತನ್ಯ ಜತೆಗಿನ ಮದುವೆ ಮುರಿದು ವಿಚ್ಛೇದನ ಪಡೆದುಕೊಂಡ ಬಳಿಕ ಸಮಂತಾ ಅವರನ್ನು ಟ್ರೋಲ್ ಮಾಡುವುದು ಮತ್ತು ವೈಯಕ್ತಿಕ ಬದುಕಿನ ಕುರಿತು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುವುದು ನಡೆಯುತ್ತಿದ್ದರೂ, ಅದಕ್ಕೆ ತಲೆಕೆಡಿಸಿಕೊಳ್ಳದೆ ಅವರು ಚಿತ್ರರಂಗದಲ್ಲಿ ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.