ಹೈದರಾಬಾದ್: ಚಿತ್ರನಟಿ ಶ್ರೀಲೀಲಾ ಅವರು ಕನ್ನಡದಲ್ಲಿ ‘ಕಿಸ್’ ಚಿತ್ರ ಮೂಲಕ ಖ್ಯಾತಿಗಳಿಸಿದ್ದು, ಇತ್ತೀಚಿಗೆ ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಇದರ ನಡುವೆ ಅವರ ವೈಯಕ್ತಿಕ ಜೀವನದ ಕುರಿತಂತೆ ಸುದ್ದಿಯಲ್ಲಿದ್ದಾರೆ.
ಶ್ರೀಲೀಲಾ ತಾವು ಉದ್ಯಮಿ ಸುರಪನೇನಿ ಶುಭಕರ ರಾವ್ ಅವರ ಮಗಳು ಎಂದು ಹೇಳಿಕೊಂಡಿದ್ದರು. ಆದರೆ, ಈ ವಿಚಾರವಾಗಿ ಶುಭಕರ ರಾವ್ ಅವರು ಸ್ಪಷ್ಟನೆ ನೀಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸುಭಾಕರ ರಾವ್ ಹೇಳಿದ್ದೇನು?
ತೆಲುಗು ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಶುಭಕರ ರಾವ್, ‘ಶ್ರೀಲೀಲಾ ನನ್ನ ಮಗಳು ಅಲ್ಲ. ನನ್ನ ಪತ್ನಿಯ ಜೊತೆ ವಿಚ್ಛೇದನ ಪಡೆದ ಬಳಿಕ ಆಕೆ ಜನಿಸಿದ್ದಾಳೆ. ನಾನು ನನ್ನ ಪತ್ನಿ 20 ವರ್ಷದಿಂದ ಬೇರೆಯಾಗಿದ್ದೇವೆ. ಸದ್ಯ ವಿಚ್ಛೇದನ ಪ್ರಕರಣ ಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ನಾನು ಆಕೆಯ ತಂದೆಯಲ್ಲ. ಶ್ರೀಲೀಲಾ ಮಾಧ್ಯಮಗಳಲ್ಲಿ ಮಾತನಾಡುವಾಗ ನನ್ನ ಹೆಸರು ಬಳಸುತ್ತಿದ್ದಾರೆ. ನನ್ನ ಆಸ್ತಿಯಲ್ಲಿ ಪಾಲು ಕೇಳುವುದಕ್ಕೆ ಆಕೆ ನನ್ನ ಹೆಸರನ್ನು ಬಳಸುತ್ತಿದ್ದಾರೆ ಈ ವಿಚಾರದಲ್ಲಿ ನಾನು ಕಾನೂನು ಹೋರಾಟ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ತೆಲುಗು ನಟ ರೋಷನ್ ಮೆಕಾ ಅಭಿನಯದ ‘ಪೆಳ್ಳಿ ಸಂದಡಿ’ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಅ.15 ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.