ವಿದ್ಯಾ ಬಾಲನ್ ನಟನೆಯ ‘ಶಕುಂತಲಾ ದೇವಿ’ ಹಿಂದಿ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಬಿಡುಗಡೆಗೆ ಸಜ್ಜಾಗಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳ ಪ್ರದರ್ಶನ ಸ್ಥಗಿತಗೊಂಡಿದ್ದರಿಂದ ಸಿನಿಮಾದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿತ್ತು. ಕೊನೆಗೆ, ಚಿತ್ರ ನಿರ್ಮಾಪಕರು ಒಟಿಟಿ ವೇದಿಕೆ ಮೂಲಕ ಈ ಚಿತ್ರ ಬಿಡುಗಡೆಗೆ ನಿರ್ಧರಿಸಿದರು. ಅಮೆಜಾನ್ ಪ್ರೇಮ್‌ನಲ್ಲಿ ಜುಲೈ 31ರಂದು ‘ಶಕುಂತಲಾ ದೇವಿ’ ಸಿನಿಮಾ ಬಿಡುಗಡೆಯಾಗಲಿದೆ.
ವಿದ್ಯಾ ಬಾಲನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ಬರೆದುಕೊಂಡಿದ್ದಾರೆ.
ಶಕುಂತಲಾ ದೇವಿ ಅವರಲ್ಲಿದ್ದ ಗಣಿತದ ಜ್ಞಾನ ಬೆಳಕಿಗೆ ಬಂದಿದ್ದು ಅವರು ಐದು ವರ್ಷದಲ್ಲಿದ್ದಾಗ. ಹದಿನೆಂಟು ವರ್ಷದ ವಿದ್ಯಾರ್ಥಿಗಳು ಓದುತ್ತಿದ್ದ ಗಣಿತದ ಸಮಸ್ಯೆಯನ್ನು ಅವರು ಆ ಚಿಕ್ಕವಯಸ್ಸಿನಲ್ಲಿ ಬಗೆಹರಿಸಿ ಎಲ್ಲರನ್ನು ಚಕಿತಗೊಳಿಸಿದ್ದರು.
ಅನು ಮೆನನ್ ನಿರ್ದೇಶನದ ಚಿತ್ರ ಇದು. ಗಣಿತಜ್ಞೆ ಶಕುಂತಲಾ ದೇವಿ ಅವರ ಬಯೋಪಿಕ್ ಇದಾಗಿದೆ. ಅವರ ಗಣಿತದ ಜ್ಞಾನಕ್ಕೆ ಸರಿಸಾಟಿಯಾಗುವವರು ಭಾರತದಲ್ಲಿ ವಿರಳ. ಅವರ ಅಪರೂಪದ ಬದುಕಿನ ಸುತ್ತ ಇದರ ಕಥೆ ಹೆಣೆಯಲಾಗಿದೆ. ಇದಕ್ಕೆ ಬಂಡವಾಳ ಹೂಡಿರುವುದು ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಮತ್ತು ವಿಕ್ರಮ್ ಮಲ್ಹೋತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.