ಬೆಂಗಳೂರು: ನನಗೆ ಹಣ ಬೇಡ. ನೆಮ್ಮದಿ ಬೇಕು. ಅದಕ್ಕಾಗಿ ಅಕ್ಕನನ್ನು ಕರೆದುಕೊಂಡು ದೂರ ಹೋಗುತ್ತೇನೆ. ಯಾರ ಕಣ್ಣಿಗೂ ಕಾಣಿಸುವುದಿಲ್ಲ ಎಂದು ನಟಿ ವಿಜಯಲಕ್ಷ್ಮೀ ಹೇಳಿದ್ದಾರೆ.
ವಿಡಿಯೋವೊಂದರಲ್ಲಿ ಮಾತನಾಡಿರುವ ಅವರು, ‘ನನಗೆ ನೆರವಾಗಲು ಯೋಗೇಶ್ ಎಂಬುವವರ ಖಾತೆಗೆ ಹಾಕಿರುವ ₹ 3 ಲಕ್ಷ ನನಗೆ ಬೇಡ. ಇದುವರೆಗೂ ಆ ಹಣ ಸಿಕ್ಕಿಲ್ಲ. ಇತ್ತೀಚೆಗೆ ಯಾರ್ಯಾರೋ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಕೃತಜ್ಞತೆ ಇಲ್ಲದವಳ ರೀತಿ ಬಿಂಬಿಸುತ್ತಿದ್ದಾರೆ. ಹೀಗಾಗಿ ನಾನು ಕರ್ನಾಟಕ ಬಿಟ್ಟು ಹೋಗುತ್ತೇನೆ’ ಎಂದಿದ್ದಾರೆ.
ಯೋಗೇಶ್ ಎಂಬುವವರು ಹಣಕ್ಕಾಗಿ ನನಗೆ ಕಿರುಕುಳ ಕೊಡುತ್ತಿದ್ದಾರೆ. ಹೀಗಾಗಿ ಅವರು ಸಂಗ್ರಹಿಸಿದ ಹಣ ನನಗೆ ಬೇಡ. ನಾಡಿನ ಜನರು ಕೊಟ್ಟಿರುವ ಹಣ ಸಾಕಷ್ಟು ಇದೆ. ನಾನು ಜನರಿಗೆ ನಿಯತ್ತಾಗಿರುತ್ತೇನೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.