ಮೈಸೂರು: ಇಲ್ಲಿ ವಿದ್ಯಾರ್ಥಿಯಾಗಿದ್ದಾಗ ಇರಾನಿ ವಿದ್ಯಾರ್ಥಿಯನ್ನು ಅತ್ಯಾಚಾರ ಮಾಡಿದ ಪ್ರಕರಣವೊಂದರಲ್ಲಿ ಮೈಸೂರು ನ್ಯಾಯಾಲಯಕ್ಕೆ ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿಯನ್ನು ಮೈಸೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಕೌಟುಂಬಿಕ ಕಲಹ ಹಾಗೂ ಹಣ ವಂಚನೆಗೆ ಸಂಬಂಧಿಸಿ ನಟಿ ರಾಖಿಸಾವಂತ್ ನೀಡಿದ ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಆದಿಲ್‌ನನ್ನು ಬಂದಿಸಿದ್ದರು. ಮಂಗಳವಾರ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಈ ಮಧ್ಯೆ, ಮೈಸೂರಿನಲ್ಲಿ ಆದಿಲ್ ವಿರುದ್ಧ ಇರಾನಿ ವಿದ್ಯಾರ್ಥಿನಿ ನೀಡಿದ ಅತ್ಯಾಚಾರ ದೂರನ್ನಾಧರಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿ.ವಿ.ಪುರಂ ಪೊಲೀಸರು ಮುಂಬೈ ನ್ಯಾಯಾಲಯದಿಂದ ಆತನನ್ನು ವಶಕ್ಕೆ ಪಡೆದು , ಬುಧವಾರ ಮೈಸೂರಿಗೆ ಕರೆತಂದು ಇಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಒಂದು ವಾರದ ಪೊಲೀಸ್ ಕಸ್ಟಡಿ ನೀಡಿದೆ.
ಮೈಸೂರಿನಲ್ಲಿ ರಾಖಿ: ಬುಧವಾರ ಮೈಸೂರಿಗೆ ಆಗಮಿಸಿದ್ದ ರಾಖಿ ಸಾವಂತ್ ಹಾಗೂ ಅವರ ವಕೀಲರು ನ್ಯಾಯಾಲದಲ್ಲಿ ಆದಿಲ್ ವಿರುದ್ಧ ದೂರು ಸಲ್ಲಿಸಿ ಆತನಿಂದಾದ ₹165 ಕೋಟಿ ವಂಚನೆ, ದೌರ್ಜನ್ಯಯದ ಮಾಹಿತಿ ನೀಡಿದ್ದರು. ಆತನಿಗೆ ಜಾಮೀನು ನೀಡಬಾರದು ಎಂದು ಕೋರಿದ್ದರು. ‘ಸಂತ್ರಸ್ತೆ ಇರಾನಿ ವಿದ್ಯಾರ್ಥಿನಿಗೆ ಬೆಂಬಲ ನೀಡಲು ಬಂದಿದ್ದೇನೆ. ಆದಿಲ್ ಇಂತಹ ಹಲವು ಕೃತ್ಯ ನಡೆಸಿದ್ದಾನೆ. ಆತನ ಮನೆಗೂ ಹೋಗಿದ್ದೆ. ಆದರೆ ನನ್ನನ್ನು ಸೊಸೆ ಎಂದು ಮನೆಮಂದಿ ಒಪ್ಪುತ್ತಿಲ್ಲ. ಧರ್ಮ ಅಡ್ಡಬರುತ್ತಿದೆ ಎಂದು ರಾಖಿ ಮಾಧ್ಯಮಗಳಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.