ಮುಂಬೈ: ಬಹುನಿರೀಕ್ಷಿತ ಸಿನಿಮಾಗಳು ತೆರೆಕಾಣುವಾಗ ಅದಕ್ಕೆ ತಕ್ಕನಾದ ಸಿದ್ಧತೆ ಅಗತ್ಯ. ಈ ವಿಚಾರದಲ್ಲಿ ‘ಟೈಗರ್ 3’ ಚಿತ್ರದ ನಿರ್ದೇಶಕ ಮನೀಶ್ ಶರ್ಮಾ ಕೂಡ ಹಿಂದೆ ಬಿದ್ದಿಲ್ಲ. ಸಾಕಷ್ಟು ಪ್ರಚಾರದೊಂದಿಗೆ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಈಗ ಚಿತ್ರತಂಡ ಇಂದಿನಿಂದ (ಭಾನುವಾರ) ಮುಂಗಡ ಬುಕಿಂಗ್ ಆರಂಭಿಸಿದ್ದು, ಭರ್ಜರಿ ಓಪನಿಂಗ್ ಪಡೆಯುವ ಸೂಚನೆ ಸಿಕ್ಕಿದೆ.
ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3 ಚಿತ್ರ ನ.12ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ ಎಂದು ‘ಯಶ್ ರಾಜ್ ಫಿಲ್ಮ್ಸ್ (ವೈಆರ್ಎಫ್) ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯಾಗಿ ನಟಿಸಿದ್ದಾರೆ.
ಈಗಾಗಲೇ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಯಾಗಿದೆ. ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇಮ್ರಾನ್ ಹಷ್ಮಿ ವಿಲನ್ ಆಗಿ ನಟಿಸಿರುವುದು ವಿಶೇಷ. ನ.12ರಂದು ಹಿಂದಿ, ತೆಲುಗು ಹಾಗೂ ಮತ್ತು ತಮಿಳಿನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.