ADVERTISEMENT

ತಾನಿಯಾ ಶ್ರಾಫ್‌ ಜತೆ ಡೇಟಿಂಗ್‌: ಮದುವೆ ಯೋಚನೆ ಮಾಡಿಲ್ಲ ಎಂದ ಅಹಾನ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 7:50 IST
Last Updated 29 ಜನವರಿ 2022, 7:50 IST
 ಅಹಾನ್‌ ಶೆಟ್ಟಿ, ತಾನಿಯಾ ಶ್ರಾಫ್‌
ಅಹಾನ್‌ ಶೆಟ್ಟಿ, ತಾನಿಯಾ ಶ್ರಾಫ್‌   

ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್‌ ಶೆಟ್ಟಿ ಅವರು ಗೆಳತಿ ತಾನಿಯಾ ಶ್ರಾಫ್‌ ಅವರ ಜತೆಗಿನಮದುವೆಯ ಬಗ್ಗೆ ಮೌನ ಮುರಿದಿದ್ದಾರೆ.

ಸದ್ಯ ನಾವು ಮದುವೆಯ ಬಗ್ಗೆ ಯೋಚನೆ ಮಾಡಿಲ್ಲ, ಹಾಗೇ ಮದುವೆಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಟುಡೆ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟಿ.ವಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದು ಅವರು ಖಚಿತಪಡಿಸಿದ್ದಾರೆ.

ADVERTISEMENT

ಅಹಾನ್‌ ಮತ್ತು ತಾನಿಯಾ ಶ್ರಾಫ್‌ ಕೆಲ ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಪರಸ್ಪರ ಒಟ್ಟಿಗೆ ಇರುವ ಚಿತ್ರಗಳನ್ನು ಶೇರ್‌ ಮಾಡುತ್ತಿರುತ್ತಾರೆ.ಅಹಾನ್‌ ಶೆಟ್ಟಿ ಕೂಡ ತಾನಿಯಾ ಶ್ರಾಫ್ ಅವರ ಹಾಟ್‌ ಚಿತ್ರಗಳನ್ನು ಆಗಾಗ ಪ್ರಕಟಿಸುತ್ತಿರುತ್ತಾರೆ.

ತಡಪ್‘ ಚಿತ್ರದ ಮೂಲಕ ಅಹಾನ್ ಶೆಟ್ಟಿ ಬಾಲಿವುಡ್‌ನಲ್ಲಿ ಗಮನಸೆಳೆದಿದ್ದಾರೆ. ತಾನಿಯಾ ಶ್ರಾಫ್ ಅವರು ಉದ್ಯಮಿ ಜೈದೇವ್ ಮತ್ತು ರೂಮಿಲಾ ಶ್ರಾಫ್ ಅವರ ಪುತ್ರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.