ADVERTISEMENT

ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಶ್ವೇತ ವಸ್ತ್ರ ಧರಿಸಿ ಕಂಗೊಳಿಸಿದ ಐಶ್ವರ್ಯ ರೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2021, 7:21 IST
Last Updated 4 ಅಕ್ಟೋಬರ್ 2021, 7:21 IST
ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಐಶ್ವರ್ಯ ರೈ
ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಐಶ್ವರ್ಯ ರೈ   

ಬೆಂಗಳೂರು: ನಟಿ ಐಶ್ವರ್ಯ ರೈ ಬಚ್ಚನ್ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಲೋರಿಯಲ್ ಪ್ಯಾರಿಸ್ ಆಯೋಜಿಸಿರುವ ‘ಪ್ಯಾರಿಸ್ ಫ್ಯಾಷನ್ ವೀಕ್‌’ನಲ್ಲಿ ಭಾಗವಹಿಸಿದ್ದಾರೆ.

ಲೋರಿಯಲ್ ಪ್ಯಾರಿಸ್ ಬ್ರ್ಯಾಂಡ್ ರಾಯಭಾರಿಯೂ ಆಗಿರುವ 47 ವರ್ಷದ ನಟಿ ಐಶ್ವರ್ಯ ರೈ ಬಚ್ಚನ್, ಶ್ವೇತ ವರ್ಣದ ಗೌನ್ ಧರಿಸಿ ರಾಂಪ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.

ಅಂತರರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿಗಳು ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದು, ಬ್ರಿಟಿಷ್ ನಟಿ ಹೆಲೆನ್ ಮಿರನ್ ಮತ್ತು ಕ್ಯಾಮಿಲಾ ಕಾಬೆಲೊ ಜತೆ ಐಶ್ವರ್ಯ ಹೆಜ್ಜೆ ಹಾಕಿದ್ದು, ಅವರ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.

ADVERTISEMENT
ಪ್ಯಾರಿಸ್ ಫ್ಯಾಷನ್ ವೀಕ್‌

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಪ್ರಸಿದ್ಧ ಐಫೆಲ್ ಟವರ್ ಬಳಿ ಪ್ಯಾಷನ್ ವೀಕ್ ಆಯೋಜಿಸಲಾಗಿದ್ದು, ಹಾಲಿವುಡ್‌ನ ಖ್ಯಾತ ನಟ-ನಟಿಯರ ದಂಡೇ ಅಲ್ಲಿ ಸೇರಿದೆ.

ಈ ಬಗ್ಗೆ ಲೋರಿಯಲ್ ಪ್ಯಾರಿಸ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಿರು ವಿಡಿಯೊ ಒಂದನ್ನು ಕೂಡ ಪೋಸ್ಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.