ನವದೆಹಲಿ: ಬಾಲಿವುಡ್ ನಟ ಅಜಯ್ ದೇವಗನ್ ಅವರು ಕುಟುಂಬದ ಜೊತೆಗಿನ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಪತ್ನಿ ಕಾಜಲ್, ಮಗ ಯುಗ್, ಮಗಳು ನೈಸಾ ಜೊತೆಗಿರುವ ಫೋಟೊ ಪೋಸ್ಟ್ ಮಾಡಿರುವ ಅಜಯ್, ‘ಕುಟುಂಬದ ಜೊತೆಗೆ ಕಾಲ ಕಳೆಯುವುದಕ್ಕಿಂತ ಪವಿತ್ರದ ವಿಷಯ ಮತ್ತೊಂದು ಇಲ್ಲ‘ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ ನಟಿ ಕಾಜಲ್ ಸಹ ಫೋಟೋವನ್ನು ಹಂಚಿಕೊಂಡು,‘ ನಾನು ಒಪ್ಪುತ್ತೇನೆ. ನೆನಪುಗಳು ಮೆಮೋರಿಯಾಗಿ ಸಂಗ್ರಹವಾಗುತ್ತದೆ‘ ಎಂದು ಅವರೂ ಬರೆದುಕೊಂಡಿದ್ದಾರೆ.
ಫೋಟೊಗೆ ಅಭಿಮಾನಿಗಳು ಕ್ಯೂಟ್, ಸುಂದರವಾದ ಕುಟುಂಬ ಎಂದು ಕಾಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.