ADVERTISEMENT

ಅಜಯ್ ದೇವಗನ್ ನಟನೆಯ ಹೊಸ ಚಿತ್ರದ ಮೊದಲ ದಿನದ ಗಳಿಕೆ ₹3 ಕೋಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 7:19 IST
Last Updated 2 ಮೇ 2022, 7:19 IST
ಅಜಯ್‌ ದೇವಗನ್
ಅಜಯ್‌ ದೇವಗನ್   

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಅಜಯ್‌ ದೇವಗನ್ ಅವರ ಹೊಸ ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ.

‘ರನ್‌ವೇ 34‘ ಚಿತ್ರ, ಆರಂಭದ ದಿನ ₹3 ಕೋಟಿ ಗಳಿಕೆಯಷ್ಟೇ ಮಾಡಿದ್ದು, ಮೊದಲ ದಿನದ ಗಳಿಕೆಯ ಬಗ್ಗೆ ಬಾಲಿವುಡ್‌ನಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂದಿದೆ.

ಅಜಯ್ ದೇವಗನ್ ಜತೆಗೆ ರಾಕುಲ್ ಪ್ರೀತ್ ಸಿಂಗ್ ಮತ್ತು ಅಮಿತಾಭ್ ಬಚ್ಚನ್ ಕೂಡ ರನ್‌ವೇ 34 ಚಿತ್ರದಲ್ಲಿ ನಟಿಸಿದ್ದಾರೆ.

ADVERTISEMENT

ಅಜಯ್ ದೇವಗನ್ ಅವರ ಚಿತ್ರವೊಂದಕ್ಕೆ ಆರಂಭಿಕ ದಿನದಲ್ಲಿ ಅತಿ ಕಡಿಮೆ ಗಳಿಕೆ ಕಂಡ ಚಿತ್ರ ಇದು ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬಂದಿದೆ.

ಜತೆಗೆ ಕನ್ನಡದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹಿಂದಿ ಅವತರಣಿಕೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದು, ₹300 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.