ADVERTISEMENT

‘ಬಡೆ ಮಿಯಾ ಛೊಟೆ ಮಿಯಾ’ ಚಿತ್ರದಲ್ಲಿ ಅಕ್ಷಯ್ –ಟೈಗರ್ ಶ್ರಾಫ್ ಜುಗಲ್‌ಬಂದಿ

ಐಎಎನ್ಎಸ್
Published 8 ಫೆಬ್ರುವರಿ 2022, 7:06 IST
Last Updated 8 ಫೆಬ್ರುವರಿ 2022, 7:06 IST
ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್
ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್    

ಮುಂಬೈ: ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ್ಯಕ್ಷನ್ ಎಂಟರ್‌ಟೈನರ್ ‘ಬಡೆ ಮಿಯಾ ಛೊಟೆ ಮಿಯಾ’ ಸಿನಿಮಾದಲ್ಲಿ ನಟರಾದ ಅಕ್ಷಯ್ ಕುಮಾರ್ –ಟೈಗರ್ ಶ್ರಾಫ್ ಒಟ್ಟಿಗೆ ನಟಿಸುತ್ತಿದ್ದಾರೆ.

ಈ ಸಿನಿಮಾ 2023ರ ಕ್ರಿಸ್‌ಮಸ್‌ ಹಬ್ಬದ ವೇಳೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

1998ರಲ್ಲಿ ದೇವಿಡ್‌ ಧವನ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಬಾಲಿವುಡ್‌ ದಂತಕಥೆಗಳಾದ ಅಮಿತಾಭ್‌ ಮತ್ತು ಗೋವಿಂದ ಅಭಿನಯದ ‘ಬಡೆ ಮಿಯಾ ಛೊಟೆ ಮಿಯಾ’ ಚಿತ್ರ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಇದೇ ಮ್ಯಾಜಿಕ್‌ ಅನ್ನು ಅಲಿ ಅಬ್ಬಾಸ್ ಜಾಫರ್ ಅವರೊಂದಿಗೆ ಮರುಸೃಷ್ಟಿಸುತ್ತಿರುವುದು ಸಂತೋಷಕರವಾಗಿದೆ’ ಎಂದು ನಿರ್ಮಾಪಕ ವಶು ಭಗ್ನಾನಿ ಹೇಳಿಕೊಂಡಿದ್ದಾರೆ.

ADVERTISEMENT

ಹೊಸ ಪೀಳಿಗೆಯ ಪ್ರೇಕ್ಷಕರಿಗೆ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರು ಬಡೇ ಮಿಯಾನ್ ಮತ್ತು ಚೋಟೆ ಮಿಯಾನ್ ಆಗಿದ್ದಕ್ಕೆ ನನಗೆ ಸಂತಸವಾಗಿದೆ ಎಂದು ತಿಳಿಸಿದ್ದಾರೆ.

ವಶು ಭಗ್ನಾನಿ ಮತ್ತು ಪೂಜಾ ಎಂಟರ್‌ಟೈನ್‌ಮೆಂಟ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರ ಹಿಂದಿ, ತೆಲುಗು, ತಮಿಳು, ಕನ್ನಡ ,ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.