ಬೆಂಗಳೂರು: ಅಕ್ಷಯ್ ಕುಮಾರ್ ಮತ್ತು ಕತ್ರೀನಾ ಕೈಫ್ ನಟನೆಯ ಸೂರ್ಯವಂಶಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಶೇಷ ದಾಖಲೆ ಮಾಡಿದೆ.
ಚಿತ್ರ ಎರಡನೇ ವಾರದಲ್ಲಿ ಒಟ್ಟು ₹151.23 ಕೋಟಿ ಆದಾಯ ಗಳಿಸಿದೆ ಎಂದು ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಅಲ್ಲದೆ, ಮೊದಲ ವಾರ ಮತ್ತು ಎರಡನೇ ವಾರದ ಗಳಿಕೆ ಹಾಗೂ ಏರಿಕೆ ಕುರಿತು ಅವರು ಪ್ರತ್ಯೇಕ ಟ್ವೀಟ್ ಮಾಡಿದ್ದು, ಸಿನಿಮಾಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.
ರೋಹಿತ್ ಶೆಟ್ಟಿ ನಿರ್ದೇಶನದ ಸಿನಿಮಾ ಸೂರ್ಯವಂಶಿ, ಆ್ಯಕ್ಷನ್ ಪ್ರಧಾನ ಚಿತ್ರವಾಗಿದೆ. ದೀಪಾವಳಿ ಬಳಿಕ ಬಹುತೇಕ ಎಲ್ಲ ಚಿತ್ರಮಂದಿರಗಳು ತೆರೆದಿದ್ದು, ಜನರು ಮತ್ತೆ ಸಿನಿಮಾ ವೀಕ್ಷಣೆಗೆ ಬರುತ್ತಿದ್ದಾರೆ.
ಹೀಗಾಗಿ ಸಿನಿಮಾ ಉತ್ತಮ ಗಳಿಕೆಯತ್ತ ಸಾಗಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.