ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಹೊಸ ಸಿನಿಮಾ ಸೆಲ್ಫಿ ಶುಕ್ರವಾರ ಬಿಡುಗಡೆಯಾಗಿದ್ದು. ಚಿತ್ರಮಂದಿರಗಳಿಗೆ ಸಿನಿಪ್ರಿಯರನ್ನು ಸೆಳೆಯಲು ಸಂಪೂರ್ಣ ವಿಫಲವಾಗಿದೆ ಎಂಬ ವರದಿಗಳು ಕೇಳಿ ಬಂದಿವೆ.
ಕೆಲ ವರದಿಗಳ ಪ್ರಕಾರ, ಸೆಲ್ಫಿ ಸಿನಿಮಾದ ಮೊದಲ ದಿನದ ಕಲೆಕ್ಷನ್ ಕೇವಲ ₹10 ಲಕ್ಷ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಮಾಡಲಾಗಿದೆ.
ಕೆಲವರು ಅಕ್ಷಯ್ ಕುಮಾರ್ ಅವರನ್ನು ‘ಮೇಲ್ ವರ್ಷನ್ ಆಫ್ ಕಂಗನಾ’ (ಕಂಗನಾ ರನೌತ್) ಎಂದು ಹಿಯಾಳಿಸಿದ್ದಾರೆ. ಏಕೆಂದರೆ ಧಾಖಡ್ ಸಿನಿಮಾ ಕೂಡ ಮೊದಲ ದಿನ ₹10 ಲಕ್ಷ ಗಳಿಸಿದ್ದಿಲ್ಲ ಎಂಬ ವರದಿಗಳು ಬಂದಿದ್ದವು.
ಇನ್ನೂ ಕೆಲವರು ಅಕ್ಷಯ್‌ಗೆ ಚಿತ್ರಮಂದಿರಗಳಿಗೆ ಜನರನ್ನು ಸೆಳೆಯುವ ಶಕ್ತಿ ಮುಗಿಯಿತಾ ಎಂದು ಪ್ರಶ್ನಿಸಿದ್ದಾರೆ.
‘ನನ್ನ ಧಾಕಡ್ ಸಿನಿಮಾ ವಿಫಲವಾದಾಗ ನನ್ನನ್ನು ಟ್ರೋಲ್ ಮಾಡಿದವರು ಈಗ ಎಲ್ಲಿ ಹೋದರು? ಎಂದು ಕಂಗನಾ ಪರೋಕ್ಷವಾಗಿ ಈ ಚಿತ್ರದ ನಿರ್ಮಾಪಕ ಕರಣ್ ಜೋಹರ್ ಅವರ ಕಾಲೆಳೆದಿದ್ದಾರೆ. ಧಾಖಡ್ ಕಲೆಕ್ಷನ್ ಬಗ್ಗೆ ಕರಣ್ ಜೋಹರ್ ಟ್ರೋಲ್ ಮಾಡಿದ್ದರು.
ಸಾಲು ಸಾಲು ಸೋಲು
ಅಕ್ಷಯ್ ಅವರ ಸಾಲು ಸಾಲು ಸಿನಿಮಾಗಳ ಸೋಲಿನ ಪಟ್ಟಿಗೆ ಈಗ ಅವರ 60ನೇ ಚಿತ್ರ ಎಂದು ಮೂದಲಿಸಿದ್ದಾರೆ. ಅಕ್ಷಯ್ ಕುಮಾರ್‌ಗೆ ಜೊತೆಯಾಗಿ ನಟ ಇಮ್ರಾನ್ ಹಾಶ್ಮಿ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಡಯಾನಾ ಫಂಟಿ, ನುಸ್ರುತ್ ಬರೂಚಾ ಚಿತ್ರದಲ್ಲಿದ್ದಾರೆ.
ಈ ಸಿನಿಮಾ ಮಲೆಯಾಳಂನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ, ಲಾಲ್ ಜೂನಿಯರ್ ನಿರ್ದೇಶನದ ಕಾಮಿಡಿ ಡ್ರಾಮಾ ‘ಡ್ರೈವಿಂಗ್ ಲೈಸೆನ್ಸ್’ ಸಿನಿಮಾದ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಹಾಗೂ ಸೂರಜ್ ವೆಂಜಾರಮೂಡು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.
ಇದೇ ಚಿತ್ರವನ್ನು ಬಾಲಿವುಡ್‌ನಲ್ಲಿ ಕರಣ್ ಜೋಹರ್ ಹಾಗೂ ಪೃಥ್ವಿರಾಜ್ ಸುಕುಮಾರನ್ ರಿಮೇಕ್ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಅವರು ವರ್ಷಕ್ಕೆ ಎರಡ್ಮೂರು ಸಿನಿಮಾಗಳನ್ನು ಕೊಡುವುದನ್ನು ನಿಲ್ಲಿಸಿಲ್ಲ. ಇದೀಗ ಸೋಲಿನ ಪಟ್ಟಿಗೆ ‘ಸೆಲ್ಫಿ’ ಹೊಸ ಸೇರ್ಪಡೆ ಎಂದು ಹಲವರು ಟ್ವಿಟರ್‌ನಲ್ಲಿ ಚರ್ಚೆ ಮಾಡಿದ್ದಾರೆ. ಅವರ ಅಭಿನಯದ ‘ಪೃಥ್ವಿರಾಜ್’, ‘ಸೂರ್ಯವಂಶಿ’, ‘ರಕ್ಷಾ ಬಂದನ್’ ಹಾಗೂ ‘ಬಚ್ಚನ್ ಪಾಂಡೆ’ ಸಾಲು ಸಾಲು ಸೋಲು ‘ರಾಮ ಸೇತು’ ತಕ್ಕಮಟ್ಟಿಗೆ ಯಶಸ್ಸು ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.