ಮುಂಬೈ: ಬಾಲಿವುಡ್ಹಿರಿಯ ನಟ, ಚಿತ್ರಕಥೆಗಾರ ಶಿವ ಸುಬ್ರಹ್ಮಣ್ಯಂ ಸೋಮವಾರ ನಿಧನರಾಗಿದ್ದಾರೆ.
ಬಾಲಿವುಡ್ ನಿರ್ಮಾಪಕರಾದ ಹನ್ಸಲ್ ಮೆಹ್ತಾ ಅವರು ಸೋಮವಾರ ಬೆಳಗ್ಗೆ ತಮ್ಮ ಟ್ವಿಟರ್‌ನಲ್ಲಿ ಶಿವ ಸುಬ್ರಹ್ಮಣ್ಯಂ ನಿಧನವನ್ನು ಖಚಿತಪಡಿಸಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈನ ಅಂಧೇರಿಯ ಶಿಶಿರಾ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತುಎಂದು ಅವರು ತಿಳಿಸಿದ್ದಾರೆ.
ನಮ್ಮ ಆತ್ಮೀಯ ಸ್ನೇಹಿತ ಶಿವ ಸುಬ್ರಮಣ್ಯಂ ಅವರ ನಿಧನದ ಬಗ್ಗೆ ತಿಳಿದು ತೀವ್ರ ಆಘಾತ ಮತ್ತು ನೋವಾಗಿದೆ. ಅವರ ಪತ್ನಿ ದಿವ್ಯಾ ಅವರಿಗೆ ನನ್ನ ಸಂತಾಪಗಳು. ದೇವರು ಅವರಿಗೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಮತ್ತೊಬ್ಬ ನಿರ್ಮಾಪಕ ಅಶೋಕ್ ಪಂಡಿತ್ ಟ್ವೀಟ್ ಮಾಡಿದ್ದಾರೆ.
80ರ ದಶಕದಲ್ಲಿ ಅವರು ಬಾಲಿವುಡ್ ಪ್ರವೇಶ ಮಾಡಿದರು. 1989ರಲ್ಲಿ ಹಿಂದಿ ಸಿನಿಮಾ ’ಪರಿಂದಾ’ಗೆ ಚಿತ್ರಕಥೆ ಬರೆದು ಜನಪ್ರಿಯರಾದರು. ನಂತರ ತೆಲುಗು, ತಮಿಳು, ಹಿಂದಿಯ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡರು.
’ಹಿಂದಿಯ ’ಚಮೇಲಿ’ ’1942 ಲವ್ ಸ್ಟೋರಿ’ ಸಿನಿಮಾಗಳುಶಿವ ಸುಬ್ರಹ್ಮಣ್ಯಂ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದವು.
ಆಲಿಯಾ ಭಟ್ ಅಭಿನಯದ'ಟು ಸ್ಟೇಟ್ಸ್' ಸಿನಿಮಾದಲ್ಲಿ ಆಲಿಯಾ ತಂದೆಯ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಇತ್ತೀಚೆಗೆ ಬಿಡುಗಡೆಯಾಗಿದ್ದ ’ಮೀನಾಕ್ಷಿ ಸುಂದರೇಶ್ವರ’ ಚಿತ್ರದಲ್ಲಿ ಶಿವ ಸುಬ್ರಹ್ಮಣ್ಯಂ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.