ADVERTISEMENT

ಗೆಳತಿಗೆ ಜನ್ಮದಿನದ ಶುಭಾಶಯ ಹೇಳಿದ ಆಲಿಯಾ ಭಟ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 12:38 IST
Last Updated 18 ಸೆಪ್ಟೆಂಬರ್ 2021, 12:38 IST
 ಆಲಿಯಾ ಭಟ್‌
ಆಲಿಯಾ ಭಟ್‌   

ನಟಿ ಆಲಿಯಾ ಭಟ್‌ ತ ನ್ನ ಬಾಲ್ಯದ ಗೆಳತಿ ಅಕಂಶಾಗೆ ಜನ್ಮದಿನದ ಶುಭಾಶಯ ಹೇಳುವುದನ್ನು ಯಾವ ವರ್ಷವೂ ಮಿಸ್‌ ಮಾಡಿಕೊಂಡಿಲ್ಲ!

ಈ ಸಲ ಮಾಲ್ಡೀವ್ಸ್‌ ಪ್ರವಾಸದಚಿತ್ರಗಳನ್ನು ಶೇರ್‌ ಮಾಡುವ ಮೂಲಕ ಗೆಳತಿ ಅಕಂಶಾಗೆ ಶುಭಾಶಯ ಕೋರಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ಅಲಿಯಾ ಭಟ್‌, ಗೆಳತಿ ಅಕಂಶಾ ಹಾಗೂ ಸಹೋದರಿ ಶಾಹೀನ್‌ ಭಟ್‌ ಜತೆ ಮಾಲ್ಡೀವ್ಸ್‌ ಪ್ರವಾಸ ಕೈಗೊಂಡಿದ್ದರು. ಕಡಲ ಕಿನಾರೆಯಲ್ಲಿ ತೆಗೆಸಿಕೊಂಡಿದ್ದ ಹಲವು ಫೋಟೊಗಳನ್ನು ಆಲಿಯಾ ಶೇರ್ ಮಾಡಿದ್ದಾರೆ.

ADVERTISEMENT

ಪ್ರವಾಸ ಹೋಗುವುದೆಂದರೆ ಆಲಿಯಾಗೆ ತುಂಬಾ ಇಷ್ಟ. ಅವರು ತಮ್ಮ ಪ್ರವಾಸದ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.