ಬಾಲಿವುಡ್ ಬಾದ್ ಷಾ ಎಂದೇ ಹೆಸರುವಾಸಿಯಾಗಿರುವ ಅಮಿತಾಭ್ ಬಚ್ಚನ್ ಅವರು ತಮ್ಮ ಕೆಲಸದ ಮೇಲಿನ ಬದ್ಧತೆ, ಸಮಯ ಪಾಲನೆಯಿಂದಲೇ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿದ್ದಾರೆ. ಈ ವಯಸ್ಸಿನಲ್ಲಿಯೂ ಬಿಗ್ ಬಿಗೆ ಕೆಲಸದ ಮೇಲೆ ಎಷ್ಟು ಆಸಕ್ತಿ ಎಂದರೆ ಟ್ರಾಫಿಕ್ ಜಾಮ್‌ನಿಂದ ಶೂಟಿಂಗ್‌ಗೆ ಸ್ಥಳಕ್ಕೆ ತಲುಪುವುದು ತಡವಾಗಬಹುದೆಂದು ಅರಿತ ಅವರು ಅಭಿಮಾನಿಯೊಬ್ಬರ ಬೈಕ್‌ನಲ್ಲಿಯೇ ಲಿಫ್ಟ್ ತೆಗದುಕೊಂಡು ಶೂಟಿಂಗ್ ಸ್ಥಳಕ್ಕೆ ತಲುಪಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಟೊ ಹಂಚಿಕೊಂಡಿರುವ ಅಮಿತಾಭ್ ಬಚ್ಚನ್ ತಮಗೆ ಬೈಕ್‌ನಲ್ಲಿ ಲಿಫ್ಟ್ ಕೊಟ್ಟ ಹಳದಿ ಶರ್ಟ್, ಶಾರ್ಟ್ ಮತ್ತು ಟೋಪಿ ಹಾಕಿರುವ ವ್ಯಕ್ತಿಗೆ ಧನ್ಯವಾದ ಹೇಳಿದ್ದಾರೆ. ನೀವು ನನ್ನನ್ನು ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ತಲುಪಿಸಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
‘ನಿಮಗೆ ಗೊತ್ತಿಲ್ಲ ನೀವು ನನ್ನನ್ನು ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಥಳಕ್ಕೆ ತಲುಪಿಸಿದ್ದೀರಿ. ಸಂಚಾರ ದಟ್ಟಣೆಯ ನಡುವೆಯೂ ನೀವು ವೇಗವಾಗಿ ಬೈಕ್ ಓಡಿಸಿ ನನ್ನನ್ನು ಸರಿಯಾದ ವೇಳೆಗೆ ತಲುಪುವಂತೆ ಮಾಡಿದ್ದೀರಿ. ಯೆಲ್ಲೊ ಶರ್ಟ್, ಶಾರ್ಟ್ ಮತ್ತು ಟೋಪಿ ಹಾಕಿಕೊಂಡಿರುವ ನಿಮಗೆ ಧನ್ಯವಾದಗಳು‘ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ನಟಿ ಸಯಾನಿ ಗುಪ್ತಾ,‘ಅಮಿತಾಭ್ ಬಚ್ಚನ್ ಸಮಯ ಪಾಲನೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆಂದು ಕೇಳಿದ್ದೆ. ಇಂದು ಅದನ್ನು ಕಣ್ಣಾರೆ ನೋಡಿದೆವು. ಉಳಿದ ನಟ–ನಟಿಯರು ಇದರಿಂದ ಏನಾದರೂ ಕಲಿಯುತ್ತಾರೆ ಎಂದು ಭಾವಿಸುತ್ತೇನೆ‘ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.