ಮುಂಬೈ: ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಎರಡು ಹೈಟೆಕ್ ವೆಂಟಿಲೇಟರ್ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಮುಂಬೈನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾನವಾಗಿ ನೀಡಿದ್ದಾರೆ ಎಂದು ಬಿಎಂಸಿ ಬುಧವಾರ ತಿಳಿಸಿದೆ.
ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮಾಹಿತಿ ಪ್ರಕಾರ, ವೆಂಟಿಲೇಟರ್‌ಗಳಲ್ಲದೆ, ಸಿ-ಆರ್ಮ್, ಇಮೇಜ್ ಇಂಟೆನ್ಸಿಫೈಯರ್ ಮತ್ತು ಇನ್ಫ್ಯೂಸರ್ ಪಂಪ್ ಸೇರಿದಂತೆ ಒಟ್ಟು 1.75 ಕೋಟಿ ಬೆಲೆಯ ಉಪಕರಣಗಳನ್ನು ಸಿಯಾನ್ ಆಸ್ಪತ್ರೆಗೆ ನೀಡಿದ್ದಾರೆ.
ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ವೆಂಟಿಲೇಟರ್‌ಗಳನ್ನು ಅಳವಡಿಸಲಾಗಿದೆ ಮತ್ತು ಈವರೆಗೆ ಸುಮಾರು 30 ರೋಗಿಗಳು ಉಪಕರಣಗಳನ್ನು ಬಳಸಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಪಾಲಿಕೆ ತಿಳಿಸಿದೆ.
ಮೆಗಾಸ್ಟಾರ್ ದಾನ ಮಾಡಿದ ವೆಂಟಿಲೇಟರ್‌ಗಳು ಹೈಟೆಕ್ ಮತ್ತು ಆಮ್ಲಜನಕದ ಮಟ್ಟ ಇಳಿಯುವ ರೋಗಿಗಳಿಗೆ ಅಥವಾ ಉಸಿರಾಟದ ತೊಂದರೆ ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.