ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ಅದ್ಧೂರಿಯಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದೆ: ನಾರಾಯಣ್‌

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 11:33 IST
Last Updated 8 ಜೂನ್ 2023, 11:33 IST
ಜನಮೆಚ್ಚಿದ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡ ‘ಕಾಂತಾರ’ ಚಿತ್ರದ ಪರವಾಗಿ ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕ ಚೆಲುವೇಗೌಡ ಪ್ರಶಸ್ತಿ ಸ್ವೀಕರಿಸಿದರು. ನಟ, ನಿರೂಪಕ ರಮೇಶ್‌ ಅರವಿಂದ್‌, ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಅಮೃತ್‌ನೋನಿ’ಯ ಎಂ.ಡಿ ಮಂಗಳಾಂಬಿಕೆ ಹಾಗೂ ಸಿಇಒ ನಾರಾಯಣ್‌ ಇದ್ದಾರೆ
ಜನಮೆಚ್ಚಿದ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡ ‘ಕಾಂತಾರ’ ಚಿತ್ರದ ಪರವಾಗಿ ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕ ಚೆಲುವೇಗೌಡ ಪ್ರಶಸ್ತಿ ಸ್ವೀಕರಿಸಿದರು. ನಟ, ನಿರೂಪಕ ರಮೇಶ್‌ ಅರವಿಂದ್‌, ರಿಷಬ್‌ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಅಮೃತ್‌ನೋನಿ’ಯ ಎಂ.ಡಿ ಮಂಗಳಾಂಬಿಕೆ ಹಾಗೂ ಸಿಇಒ ನಾರಾಯಣ್‌ ಇದ್ದಾರೆ   

‘ಪ್ರಜಾವಾಣಿ’ಯು ಇದೇ ಮೊದಲ ಬಾರಿಗೆ ಇಂಥದೊಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಇಡೀ ಕಾರ್ಯಕ್ರಮವು ಎಷ್ಟು ಅಚ್ಚುಕಟ್ಟಾಗಿತ್ತೆಂದರೆ, ಮೊದಲನೇ ಬಾರಿಗೆ ಇಂಥ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಗೊತ್ತಾಗದ ಹಾಗೆ ಇತ್ತು. ಸಿನಿರಂಗದ ಎಲ್ಲ ಅತಿಥಿಗಳೂ ಬಂದಿದ್ದರು. ಇಡೀ ಕಾರ್ಯಕ್ರಮ ಬಹಳ ಸೊಗಸಾಗಿತ್ತು. ಒಂದು ಅದ್ಧೂರಿಯಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದೆ’....

ಹೀಗೆಂದವರರು ‘ಅಮೃತ್‌ನೋನಿ’ ಸಿಇಒ ನಾರಾಯಣ್.

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾರಾಯಣ್‌ ಅವರು, ಜನಮೆಚ್ಚಿದ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡ ‘ಕಾಂತಾರ’ ಸಿನಿಮಾ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ತಮ್ಮ ಸಂಸ್ಥೆಯ ಹೆಜ್ಜೆಗಳನ್ನು ಮೆಲುಕು ಹಾಕಿದರು.

ADVERTISEMENT

ಹಲವು ವರ್ಷಗಳು ಹಲವು ರೋಗಗಳಿಂದ ಬಳಲುತ್ತಿದ್ದ ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡೆಕೊಪ್ಪದ ಶ್ರೀನಿವಾಸಮೂರ್ತಿ ಅವರಿಗೆ ಯಾರೋ ಗೆಳೆಯರು ತಂದುಕೊಟ್ಟ ನೋನಿ ರಸವು ರಾಮಬಾಣವಾಗಿ ಪರಿಣಮಿಸಿತು. ಆಯುರ್ವೇದ ಪದ್ಧತಿಯೊಂದಿಗೆ ಶ್ರೀನಿವಾಸಮೂರ್ತಿ ಅವರ ಸಂಶೋಧನೆಯೂ ಸೇರಿಕೊಂಡು ‘ಅಮೃತ್‌ನೋನಿ’ ಎನ್ನುವ ಇಷ್ಟು ದೊಡ್ಡ ಸಂಸ್ಥೆಯು ಹುಟ್ಟಿಕೊಂಡಿತು.

ಶ್ರೀನಿವಾಸಮೂರ್ತಿ ಅವರು ವರ್ಷದಿಂದ ಹಾಸಿಗೆ ಹಿಡಿದಿದ್ದರು. ಯಾವ ಅಲೋಪಥಿ, ಆಯುರ್ವೇದದ ಔಷಧಗಳೂ ಕೆಲಸಕ್ಕೆ ಬಾರದಾದಾಗ, ಇವರ ಸ್ನೇಹಿತರು ನೋನಿ ಹಣ್ಣಿನ ರಸವನ್ನು ಕುಡಿಯುವಂತೆ ಸಲಹೆ ನೀಡಿದರು. ಆದರೆ, ನೋನಿ ಹಣ್ಣಿನ ರಸಕ್ಕೆ ₹2,500ಕ್ಕೂ ಅಧಿಕ ಬೆಲೆ ಇತ್ತು. ಇದು ಶ್ರೀನಿವಾಸಮೂರ್ತಿ ಅವರಿಗೆ ಆರ್ಥಿಕ ಹೊರೆಯಾಗಿತ್ತು. ಇದಕ್ಕಾಗಿ ಅವರು ನೋನಿ ಹಣ್ಣಿನ ರಸ ಪಡೆಯುವುದರ ಕುರಿತು ಸಂಶೋಧನೆ ಆರಂಭಿಸಿದರು.

ಕೊಪ್ಪ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಜಯ್‌ ಅವರ ಸಹಕಾರದಿಂದ ನೋನಿ ರಸ ತೆಗೆಯುವುದನ್ನು ಕಲಿತುಕೊಂಡ ಶ್ರೀನಿವಾಸಮೂರ್ತಿ ಅವರು ವಾರದಲ್ಲೇ ಗುಣಮುಖರೂ ಆದರು. ನಂತರ ಮನೆಯಲ್ಲಿಯೇ ನೋನಿ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡರು.

ಇದು ಎಲ್ಲೆಡೆ ಪ್ರಚಾರ ಪಡೆದುಕೊಂಡಿತು. ನೋನಿ ರಸವನ್ನು ಕೇಳಿಕೊಂಡು ಮೂರ್ತಿಯವರ ಬಳಿಗೆ ಬೇರೆ ರೋಗಿಗಳೂ ಬರತೊಡಗಿದರು. ಮೊದಲು ಅವರೇ ತಂದ ಬಾಟಲಿಗಳಿಗೆ ನೋನಿ ರಸವನ್ನು ತುಂಬಿಕೊಡುತ್ತಿದ್ದ ಮೂರ್ತಿಯವರು ಬೇಡಿಕೆ ಇದೆ ಎಂದು ಗೊತ್ತಾದಾಗ ತಮ್ಮ ಹೊಲದಲ್ಲೇ ನೋನಿ ಬೆಳೆಯಲು ತೊಡಗಿದರು. ಪತ್ನಿ ಅಂಬುಜಾಕ್ಷಿ ಸಣ್ಣ ಗುಡಿ ಕೈಗಾರಿಕೆಯನ್ನೇ ಸ್ಥಾಪಿಸಲು ಮನಸ್ಸು ಮಾಡಿದರು. ಮನೆಯಲ್ಲೇ ಫ್ಯಾಕ್ಟರಿ. ಹಾಗೆ ಹುಟ್ಟಿದ್ದು ‘ಅಮೃತ್‌ನೋನಿ’. ಅದನ್ನು ಮಾರುಕಟ್ಟೆಗೆ ಒದಗಿಸಲು ರೂಪಿಸಿದ ಕಂಪೆನಿ ValYou Products.

ಇಬ್ಬರೂ ಸೇರಿ ತೋಟದಲ್ಲೇ ಸಂಸ್ಕರಣಾ ಘಟಕ ಹಾಕಿ, ಪ್ರಯೋಗಾಲಯವನ್ನು ಸ್ಥಾಪಿಸಿದರು. ನೋನಿ ಸೋಪ್‌, ಅಮೃತ್‌ ಕೇಶ ತೈಲ, ಅಮೃತ್‌ ನೋವಿನೆಣ್ಣೆ – ಹೀಗೆ ಹಲವು ಉತ್ಪನ್ನಗಳನ್ನು ಹೊರತಂದರು. ಹೀಗೆ ಸಂಸ್ಥೆ ಹುಟ್ಟಿಕೊಂಡಿತು.

ಅಮೃತ್‌ನೋನಿ ಡಿ ಪ್ಲಸ್‌, ಅಮೃತ್‌ನೋನಿ ಆರ್ಥೊಪ್ಲಸ್‌, ಅಮೃತ್‌ನೋನಿ ಪವರ್‌ ಪ್ಲಸ್‌ ಸೇರಿದಂತೆ ಒಟ್ಟು ಎಂಟು ಉತ್ಪನ್ನಗಳಿವೆ. ಕ್ಯಾನ್ಸರ್‌ಗೆ, ಧಮ್ಮು, ನೋವಿಗೆ, ಶ್ಯಾಂಪು, ಹೇರ್‌ ಆಯಿಲ್‌, ಪೈಲ್ಸ್‌ ಹೀಗೆ ಎಲ್ಲ ಸೇರಿ ಮುಂದಿನ ಒಂದು ವರ್ಷದಲ್ಲಿ 25–30 ಉತ್ಪನ್ನ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.
–ನಾರಾಯಣ, ಸಿಇಒ, ‘ಅಮೃತ್‌ನೋನಿ’

ಗುಣಮಟ್ಟದ ಉತ್ಪನ್ನ: ಜನರ ವಿಶ್ವಾಸ

‘ಗುಣಮಟ್ಟದ ಉತ್ಪನ್ನ ನೀಡುವುದು ನಮ್ಮ ಉದ್ದೇಶ. ನಾವು ಮಾರುಕಟ್ಟೆಗೆ ಬಂದು ಈಗ 14 ವರ್ಷವಾಯಿತು. ಇಲ್ಲಿಯವರೆಗೂ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಬಂದಿದ್ದೇವೆ. ನಮ್ಮ ಉತ್ಪನ್ನದ ಗುಣಮಟ್ಟ ಮತ್ತು ಗ್ರಾಹಕರಿಗೆ ನಾವು ನೀಡುತ್ತಿರುವ ಸೇವೆಯೇ ಇದಕ್ಕೆ ಕಾರಣ’ ಎನ್ನುತ್ತಾರೆ ಅಮೃತ್‌ನೋನಿ ಸಿಇಒ ನಾರಾಯಣ್‌.

‘ಮಾರುಕಟ್ಟೆಯಲ್ಲಿ ನಮ್ಮ ಸಂಸ್ಥೆಯ ಎಂಟು ಉತ್ಪನ್ನಗಳು ಮಾತ್ರ ಇವೆ. ಮಾರುಕಟ್ಟೆಗೆ ಬಂದು 14 ವರ್ಷವಾದರೂ ಎಂಟೇ ಉತ್ಪನ್ನ ಎಂದುಕೊಳ್ಳಬಹುದು. ನಮ್ಮ ಸಂಸ್ಥೆ ಮಾರುಕಟ್ಟೆಗೆ ಉತ್ಪನ್ನವನ್ನು ಬಿಡುಗಡೆ ಮಾಡುವುದಕ್ಕೆ ಆತುರ ತೋರುವುದಿಲ್ಲ. ಪ್ರತಿ ಉತ್ಪನ್ನವನ್ನು ಹಲವು ವಿಧಗಳಲ್ಲಿ ಸಂಶೋಧನೆಗೆ ಒಳಪಡಿಸುತ್ತೇವೆ. ಅಂದರೆ, ಪ್ರೀ ಕ್ಲಿನಿಕಲ್‌, ಕ್ಲಿನಿಕಲ್‌ ಪರೀಕ್ಷೆ ಹೀಗೆ’ ಎಂದರು.

‘ಭಾರತದ ಐದು ರಾಜ್ಯಗಳಲ್ಲಿ ನಮ್ಮ ಮಾರುಕಟ್ಟೆ ಇದೆ. ಆಯುರ್ವೇದಲ್ಲಿ ಎಂ.ಡಿ ಓದಿದ 35 ಡಾಕ್ಟರ್‌ ನಮ್ಮ ಜೊತೆ ಇದ್ದಾರೆ. ಜೊತೆಗೆ, ಒಟ್ಟು 250 ಕಸ್ಟಮರ್‌ ಕೇರ್‌ ಕೇಂದ್ರಗಳಿವೆ. ಈ ಕೇಂದ್ರಗಳ ಮೂಲಕ ರೋಗಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲಾಗುತ್ತದೆ. ನಮ್ಮ ಉತ್ಪನ್ನವನ್ನು ಹೇಗೆ ಬಳಸಬೇಕು, ಜೀವನಶೈಲಿ ಹೇಗಿರಬೇಕು ಎಂಬಂಥ ಮಾಹಿತಿಗಳನ್ನು ನೀಡಲಾಗುತ್ತದೆ’ ಎಂದರು.

‘ನಮ್ಮದೇ 160 ಎಕರೆ ಪ್ರದೇಶದಲ್ಲಿ ನಾವೇ ನೋನಿ ಹಣ್ಣಿನ ಗಿಡಗಳನ್ನು ಬೆಳೆಸುತ್ತೇವೆ. ನಮ್ಮ ಉತ್ಪನ್ನಗಳಿಗೆ ಬಳಸುವ ಗಿಡಮೂಲಿಕೆಗಳನ್ನೂ ನಾವೇ ಬೆಳೆದುಕೊಳ್ಳುತ್ತೇವೆ. ಸಾವಯವ ಗೊಬ್ಬರ ಮೂಲಕವೇ ಕೃಷಿ ಮಾಡಲಾಗುತ್ತದೆ. ಈ  ಕಾರಣದಿಂದಲೂ ನಮ್ಮ ಉತ್ಪನ್ನ ಗುಣಮಟ್ಟ ಕಾಯ್ದುಗೊಂಡಿದೆ’ ಎಂದರು.

ಅಮೃತ್‌ನೋನಿ ಕುರಿತಾದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಟಿ ಪೂಜಾ ಗಾಂಧಿ ವಿಜೇತರಾದರು. ಇದೇ ವೇಳೆ ಪೂಜಾ ಗಾಂಧಿ ಅಮೃತ್‌ನೋನಿ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

‘ಪ್ರಜಾವಾಣಿ’ ಜೊತೆ ನನಗೆ 15 ವರ್ಷಗಳ ನಂಟಿದೆ. ಏಕೆಂದರೆ ನಾನು ಜಾಹೀರಾತು ಕ್ಷೇತ್ರದಿಂದ ಬಂದವನು. ನಮ್ಮ ಕರ್ನಾಟಕದ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಏಕೈಕ ಪತ್ರಿಕೆ ‘ಪ್ರಜಾವಾಣಿ’. ಪತ್ರಿಕೆ 75 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಚಾರ ಎನ್ನುತ್ತಾರೆ ‘ಅಮೃತ್‌ ನೋನಿ’ ಸಿಇಒ ನಾರಾಯಣ್‌. ‘ಪ್ರಜಾವಾಣಿ ನೂರು ವರ್ಷಗಳನ್ನು ಪೂರೈಸಿ ಮುನ್ನಡೆಯಲಿ. ಕನ್ನಡ ಸಿನಿ ಸಮ್ಮಾನ ಎನ್ನುವ ಕಾರ್ಯಕ್ರಮವೂ ಇದೇ ರೀತಿ ಅದ್ಧೂರಿಯಾಗಿ ನಡೆಯಲಿ ಎನ್ನುವುದು ಹಾರೈಕೆ’ ಎಂದರು ‘ಅಮೃತ್‌ ನೋನಿ’ ಎಂ.ಡಿ ಮಂಗಳಾಂಬಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.