ADVERTISEMENT

ರಶ್ಮಿಕಾ-ರಣಬೀರ್ ಅಭಿನಯದ 'ಅನಿಮಲ್' ಟ್ರೈಲರ್ ರಿಲೀಸ್

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಚಿತ್ರದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2023, 11:21 IST
Last Updated 23 ನವೆಂಬರ್ 2023, 11:21 IST
<div class="paragraphs"><p>ರಣಬೀರ್ ಕಪೂರ್‌</p></div>

ರಣಬೀರ್ ಕಪೂರ್‌

   

(ಚಿತ್ರ ಕೃಪೆ–Instagram/@animalthefilm)

ಮುಂಬೈ (ಮಹಾರಾಷ್ಟ್ರ): ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದ ಅಧಿಕೃತ ಟ್ರೈಲರ್ ಇಂದು (ಗುರುವಾರ) ಅನಾವರಣಗೊಂಡಿದೆ.

ADVERTISEMENT

ಚಿತ್ರದಲ್ಲಿ ರಣಬೀರ್, ರಶ್ಮಿಕಾ, ಅನಿಲ್ ಕಪೂರ್ ಮತ್ತು ಬಾಬಿ ದೆವೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ತಂದೆ-ಮಗನ ಸಂಬಂಧದ ಕುರಿತಾಗಿದೆ.

ಚಿತ್ರದಲ್ಲಿ ಅನಿಲ್‌ ಕಪೂರ್‌ ಅವರು ರಣಬೀರ್‌ ಕಪೂರ್‌ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಬಾಬಿ ದೆವೋಲ್ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್ ನಲ್ಲಿ ಬಾಬಿ ದೆವೋಲ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ರಣಬೀರ್ ಕಪೂರ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ಟಿ-ಸೀರೀಸ್ ಮತ್ತು ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಿದ ಈ ಚಿತ್ರ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿ 5 ಭಾಷೆಗಳಲ್ಲಿ ಡಿ.1ರಂದು ತೆರೆಕಾಣಲಿದೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.