‘ಮಣಿಕರ್ಣಿಕ: ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದ ನಟಿ ಅಂಕಿತಾ ಲೋಖಂಡೆ ಅವರು ‘ಭಾಗಿ 3’ ಸಿನಿಮಾವನ್ನು ಸೇರಿಕೊಂಡಿದ್ದು, ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರ ಸಹೋದರಿ ಪಾತ್ರದಲ್ಲಿ ನಟಿಸಲಿದ್ದಾರೆ.
ಕಿರುತೆರೆಯಲ್ಲಿ ಭಾರಿ ಪ್ರಖ್ಯಾತ ಗಳಿಸಿದ್ದ ಅಂಕಿತಾ ಲೋಖಂಡೆ ಅವರಿಗೆ ಬಾಲಿವುಡ್‌ನಲ್ಲಿ ಇದು ಎರಡನೇ ಚಿತ್ರ. ‘ಈ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ನನಗೆ ಗೊತ್ತು. ಈ ಹಿಂದಿನ ಎರಡು ಚಿತ್ರಗಳಿಗಿಂತ ಈ ಚಿತ್ರ ವಿಭಿನ್ನವಾಗಿರಲಿದ್ದು, ಭಾಗಿ–3 ಕೌಟುಂಬಿಕ ಪ್ರಧಾನ ಚಿತ್ರ’ ಎಂದು ಅಂಕಿತಾ ಹೇಳಿದ್ದಾರೆ.
‘ಇದರಲ್ಲಿ ನನ್ನದು ಆಪ್ತ ಸಂಬಂಧ ಹೊಂದಿರುವ ಸಹೋದರಿಯರಾಗಿ ನಟಿಸಿದ್ದೇವೆ. ಕಿರುತೆರೆಯಲ್ಲೂ ಈ ಥರ ಪಾತ್ರ ನಾನು ಮಾಡಿಲ್ಲ’ ಎಂದು ಹೇಳಿದ್ದಾರೆ.‘ಭಾಗಿ 3’ ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಶಿಸುತ್ತಿದ್ದು, ಟೈಗರ್ ಶ್ರಾಫ್ ಹಾಗೂ ಶ್ರದ್ಧಾ ಕಪೂರ್ ಅವರೇ ಈ ಚಿತ್ರದಲ್ಲೂ ನಾಯಕ– ನಾಯಕಿಯರಾಗಿ ನಟಿಸಿದ್ದಾರೆ. ರಿತೇಶ್ ದೇಶ್‌ಮುಖ್ ಅವರು ಈ ಚಿತ್ರದಲ್ಲಿ ಟೈಗರ್ ಶ್ರಾಫ್ ಅವರ ಸಹೋದರನಾಗಿ ನಟಿಸಿದ್ದಾರೆ. ಈ ಚಿತ್ರ ನಿರ್ಮಾಣ ಮಾಡುತ್ತಿರುವವರು ಸಾಜಿದ್ ನಡಿಯಾವಾಲಾ. ಈ ಚಿತ್ರವು 2020ರ ಮಾರ್ಚ್ 6ರಂದು ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.