ಬಾಲಿವುಡ್ ನಟಿ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾಶರ್ಮಾ, ಭಾರತ ಮಹಿಳಾ ಕ್ರಿಕೆಟ್ ತಂಡದ ವೇಗಿ ಜೂಲನ್ ಗೋಸ್ವಾಮಿ ಜೀವನಾಧಾರಿತ 'ಚಕ್ಡಾ ಎಕ್ಸ್‌ಪ್ರೆಸ್'ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಬರೋಬ್ಬರಿ 5 ವರ್ಷಗಳ ನಂತರ ಬಾಲಿವುಡ್‌ಗೆ ಮರಳುತ್ತಿರುವ ಅನುಷ್ಕಾ ಅವರ ಜೂಲನ್ ಅವತಾರ ಅಪಾರ ನಿರೀಕ್ಷೆಯನ್ನೂ ಉಂಟುಮಾಡಿದೆ.
ಅಂತರರಾಷ್ಟ್ರೀಯ ಕ್ರೀಡಾಳುವಾಗಿರುವಜೂಲನ್ ಅವರ ದೇಹ ಭಾಷೆ, ಬೌಲಿಂಗ್ ಶೈಲಿಯನ್ನು ನಿಖರವಾಗಿ ರೂಢಿಸಿಕೊಳ್ಳಲು ಅನುಷ್ಕಾ ಮಾಡುತ್ತಿರುವ ಕಸರತ್ತುಗಳು ಒಂದೆರಡಲ್ಲ.ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾದಮೇಲೊಂದು ಪೋಸ್ಟ್ ಹಾಕುತ್ತಾ ಅಭಿಮಾನಿಗಳ ಕುತೂಹಲ ಕೆರಳಿಸುತ್ತಿರುವಅನುಷ್ಕಾ, ಇದೀಗ ಮತ್ತೊಂದು ತುಣುಕು ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಹಾಕಲಾಗಿರುವ ಈ ವಿಡಿಯೊ ಜೊತೆಗೆ'ಕಳೆದ ಕೆಲವು ದಿನಗಳು ಹೀಗೆಯೇ ಇದ್ದವು' ಎಂದು ಬರೆದುಕೊಂಡಿದ್ದಾರೆ. ಕ್ಯಾಪ್ ಧರಿಸಿ ಆಟಕ್ಕೆ ಅಣಿಯಾಗುವುದು, ವೇಗದ ಬೌಲಿಂಗ್ ಶೈಲಿಯನ್ನು ಅಭ್ಯಸಿಸುತ್ತಿರುವುದು, ದಣಿವು ನೀಗಿಸಲು ನೀರು ಕುಡಿಯುತ್ತಿರುವುದು, ಬೆವರು ಒರೆಸಿಕೊಳ್ಳುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ.
ಈ ವಿಡಿಯೊ ಹಂಚಿಕೆಯಾದ ಕೆಲವೇ ಗಂಟೆಗಳಲ್ಲಿ 6.3 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ. ಜೂಲನ್ ಅವರು ಹೃದಯ ಹಾಗೂ ಚಪ್ಪಾಳೆಯಇಮೋಜಿಗಳನ್ನು ಹಾಕಿ ಅನುಷ್ಕಾರನ್ನು ಹುರಿದುಂಬಿಸಿರುವುದು ವಿಶೇಷ.
ಅಂದಹಾಗೆ,ಅನುಷ್ಕಾ2018ರಲ್ಲಿ ತೆರೆ ಕಂಡ ಶಾರುಕ್ ಖಾನ್ ಮತ್ತು ಕತ್ರೀನಾ ಕೈಫ್ ಅಭಿನಯದ 'ಝೀರೋ' ಸಿನಿಮಾದಲ್ಲಿ ನಟಿಸಿದ್ದೇ ಕೊನೆ. ಅದಾದ ನಂತರ ಅವರು ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.