ಗರ್ಭಿಣಿಯಾಗಿದ್ದಾಗ ಧರಿಸುತ್ತಿದ್ದ ಅಚ್ಚುಮೆಚ್ಚಿನ ಬಟ್ಟೆಗಳನ್ನು ನಟಿ ಅನುಷ್ಕಾ ಶರ್ಮಾ ಮಾರಾಟಕ್ಕೆ ಇಡುವ ಮೂಲಕ 'ಸರ್ಕ್ಯೂಲರ್ ಫ್ಯಾಶನ್'ಗೆ ಉತ್ತೇಜನ ನೀಡಿದ್ದಾರೆ.
ಸರ್ಕ್ಯೂಲರ್ ಫ್ಯಾಶನ್ ಎಂದರೆ ತಾವು ಬಳಸಿದೆ ಬಟ್ಟೆಗಳನ್ನು ಅಗತ್ಯ ಇರುವವರಿಗೆ ನೀಡುವುದು ಅಥವಾ ಹರಾಜು ಹಾಕುವುದಾಗಿದೆ. ನಂತರ ಅದನ್ನು ರೀಸೈಕಲ್ ಮೂಲಕ ಪುನಃ ಬಳಕೆ ಮಾಡಲು ಪ್ರಯತ್ನಿಸುವುದಾಗಿದೆ. ಹೀಗೆ ಎಲ್ಲರೂ ಸರ್ಕ್ಯೂಲರ್ ಫ್ಯಾಶನ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಪ್ರಕೃತಿ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂಬುದು ಅನುಷ್ಕಾರ ವಿಶ್ವಾಸವಾಗಿದೆ.
ಮಗಳು ವಮಿಕಾಳೊಂದಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಜೊತೆ ಇಂಗ್ಲೆಂಂಡ್‌ನಲ್ಲಿರುವ ಅನುಷ್ಕಾ ಶರ್ಮಾ, ಗರ್ಭಿಣಿಯಾಗಿದ್ದಾಗ ಬಳಸುತ್ತಿದ್ದ ಬಟ್ಟೆ, ಮತ್ತಿತರ ವಸ್ತುಗಳನ್ನು ಆನ್‌ಲೈನ್ ಮೂಲಕ ಮಾರಾಟಕ್ಕೆ ಇಟ್ಟಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ಗರ್ಭಿಣಿಯರ ಆರೋಗ್ಯಕ್ಕೆ ಸಹಾಯ ಮಾಡುವ 'ಸ್ನೇಹಾ' ಫೌಂಡೇಷನ್‌ಗೆ ತಮ್ಮ ವಸ್ತ್ರಗಳಿಂದ ಬಂದ ಹಣವನ್ನು ನೀಡಲಿದ್ದಾರೆ.
ನಗರದ ಶೇಕಡಾ 1ರಷ್ಟು ಗರ್ಭಿಣಿಯರು ಇಂತಹ ಒಂದು ಬಟ್ಟೆ ಖರೀದಿಸಿದರೆ ಪ್ರತಿವರ್ಷ ಒಬ್ಬ ವ್ಯಕ್ತಿ 200 ವರ್ಷಗಳಲ್ಲಿ ಕುಡಿಯುವಷ್ಟು ನೀರನ್ನು ಉಳಿಸಲು ಸಾಧ್ಯ ಎಂದು ಅನುಷ್ಕಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.